ಮೀನುಲಿ ಮುನ್ನಾರ್ ಗಿರಿಧಾಮಕ್ಕೆ ಸಮೀಪದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಚಾರಣ ಮತ್ತು ಪರ್ವತಾರೋಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿ ಖ್ಯಾತಿ ಪಡೆದಿದೆ. ಪರಿಸರವು ತನ್ನ ವಿಶ್ವರೂಪವನ್ನು ಇಲ್ಲಿ ತೆರೆದಿಟ್ಟಿದೆ ಎಂದು ಹೇಳಬಹುದು. ಮೀನುಲಿಯು ತನ್ನ ಖ್ಯಾತಿಯನ್ನು ಇಲ್ಲಿನ ಬಂಡೆಗಳು ಮತ್ತು ನಿತ್ಯ ಹಚ್ಚ ಹಸಿರಾಗಿರುವ ಕಾಡುಗಳಿಂದ ಗಳಿಸಿಕೊಂಡಿದೆ. ಮೀನುಲಿಯಲ್ಲಿ ಇರುವ ಒಂದು ಬಂಡೆಯು ಸುಮಾರು 500 ಎಕರೆಗಳಷ್ಟು ವಿಶಾಲ ಪ್ರದೇಶವನ್ನು ವ್ಯಾಪಿಸಿದೆ.
ಕೆಳ ಪೆರಿಯಾರ್ ಮತ್ತು ಭೂತತಂಕೆಟ್ಟುಗಳಿಂದ ಯಾರು ಬೇಕಾದರು ಈ ಬಂಡೆಯ ಉದ್ದಗಲಗಳನ್ನು ಪರಿಶೀಲಿಸುವ ಸಾಹಸವನ್ನು ಕೈಗೊಳ್ಳಬಹುದು. ಆದರೆ ಇವೆರೆಡಷ್ಟೇ ಅಂತ್ಯವಲ್ಲ. ಈ ಬಂಡೆಯ ತುದಿಯ ಮೇಲೆ ಎರಡು ಎಕರೆಗಳಷ್ಟು ನಿತ್ಯ ಹರಿದ್ವರ್ಣದ ಕಾಡುಗಳು ಬೆಳೆದಿದೆ. ಬಂಡೆಯ ಮೇಲಿರುವ ಹಸಿರಿನ ಕಿರೀಟವು ಪ್ರಕೃತಿಯ ಕಲಾ ನೈಪುಣ್ಯತೆಯನ್ನು ಪರಿಚಯ ಮಾಡಿಕೊಡುತ್ತದೆ.
ಮೀನುಲಿ ಚಾರಣ ಮತ್ತು ಶಿಲಾರೋಹಣ ಮಾಡುವವರಿಗೆ ಸಾಹಸದ ಸ್ಫೂರ್ತಿಯನ್ನುತುಂಬುತ್ತದೆ. ಪರ್ವಾತಾರೋಹಿಗಳಿಗೆ ಈ ತಾಣವು ಭೇಟಿಕೊಡಲೆ ಬೇಕಾದ ತಾಣವಾಗಿ ಗುರುತಿಸಿಕೊಂಡಿದೆ. ಇಲ್ಲಿಗೆ ಭೇಟಿಕೊಡುವವರು ಆಹಾರ ಮತ್ತು ನೀರನ್ನು ಮರೆಯದೆ ಕಡ್ಡಾಯವಾಗಿ ತರುವುದು ಉತ್ತಮ.