Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಅಟ್ಟುಕಲ್

ಅಟ್ಟುಕಲ್, ಮುನ್ನಾರ್

2

 ಅಟ್ಟುಕಲ್ ಎಂಬ ಸ್ಥಳವು ತನ್ನಲ್ಲಿರುವ ಜಲಪಾತಕ್ಕಾಗಿ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಗುರುತಿಸಲ್ಪಟ್ಟಿದೆ. ಇದು ಮುನ್ನಾರಿನಿಂದ 9 ಕಿ.ಮೀ ದೂರದಲ್ಲಿದ್ದು, ಹವ್ಯಾಸಿ ಪ್ರವಾಸಿಗರು ಮತ್ತು ವಿಹಾರಿಗಳಿಂದ ತುಂಬಿರುತ್ತದೆ. ಈ ಸ್ಥಳವು ಮುನ್ನರ್ ಮತ್ತು ಪಲ್ಲಿವಸಲ್‍ಗಳ ನಡುವೆ ನೆಲೆಸಿದೆ. ಹಾಗಾಗಿ ಪ್ರವಾಸಿಗರು ಪಲ್ಲಿವಸಲ್ ಮತ್ತು ಅಟ್ಟುಕಲ್ ಎರಡೂ ಸ್ಥಳಗಳನ್ನು ಪ್ರಯಾಣದ ಸಮಯದಲ್ಲಿ ಒಮ್ಮೆಗೆ ನೋಡಿ ಬರಬಹುದು.

ಈ ಆದರ್ಶ ಸ್ಥಳವು ಸ್ವಚ್ಛ ಮತ್ತು ಸೌಂದರ್ಯದ ಪರಾಕಾಷ್ಟೆ ತಲುಪಿರುವ, ಪ್ರಾಕೃತಿಕ ಶ್ರೀಮಂತಿಕೆಯಿಂದ ಕೂಡಿರುವ ಬೆಟ್ಟಗಳಿಂದ ಸುತ್ತುವರೆದಿದೆ. ಈ ಜಲಪಾತದ ಸುತ್ತಲು ಹಲವಾರು ಚಾರಣಗಳ ಹಾದಿಯಿದ್ದು, ಇದು ಚಾರಣಿಗರಿಗೆ ಹೇಳಿ ಮಾಡಿಸಿದ ತಾಣವಾಗಿ ಪರಿಣಮಿಸಿದೆ. ಅಟ್ಟುಕಲ್‍ಗೆ ಭೇಟಿ ಕೊಡಲು ಮಳೆಗಾಲ ಮುಗಿದ ತಕ್ಷಣದ ಕಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆಗ ಇಲ್ಲಿನ ಜಲಧಾರೆಗಳು ಧುಮ್ಮಿಕ್ಕಿ ಹರಿಯುತ್ತಿದ್ದರೆ, ಇಲ್ಲಿನ ಹಸಿರು ಹೊಸ ಕಳೆಯಿಂದ ಹುಲುಸಾಗಿ ಬೆಳೆದಿರುತ್ತವೆ. ಮೈಲುಗಟ್ಟಲೆ ದೂರದಿಂದಲೆ ಈ ಜಲಪಾತದ ಭೋರ್ಗರೆತವನ್ನು ಕೇಳಬಹುದು. ಕವಲುಗಳಲ್ಲಿ ಬೆಳ್ನೊರೆಯೊಂದಿಗೆ ಧುಮ್ಮಿಕ್ಕುವ ಈ ಜಲಪಾತವು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಅಟ್ಟುಕಲ್‍ಗೆ ಭೇಟಿ ಕೊಡುವವರು ನೋಡಲೆ ಬೇಕಾದ ಎರಡು ಸ್ಥಳಗಳಲ್ಲಿ ಚೀಯಪರ ಜಲಪಾತ ಮತ್ತು ವಲರ ಜಲಪಾತಗಳು ಸೇರಿವೆ. ಜಲಕ್ರೀಡೆಯ ಮೋಜು ಅನುಭವಿಸುವವರಿಗೆ ಈ ಎರಡು ಜಲಪಾತಗಳು ಹೇಳಿ ಮಾಡಿಸಿದ ತಾಣವಾಗಿದ್ದು, ಪ್ರವಾಸಿಗರು ಆ ಕಾರಣಕ್ಕಾಗಿ  ಇಲ್ಲಿಗೆ ನಿಯಮಿತವಾಗಿ ಬರುತ್ತಿರುತ್ತಾರೆ.

 

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon