Search
 • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ಎರವಿಕುಲಂ ರಾಷ್ಟ್ರೀಯ ಉದ್ಯಾನವನ

ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಮುನ್ನಾರ್

4

 ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮುನ್ನಾರಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ 97 ಚ.ಕಿ.ಮೀ ಗಳಷ್ಟು ವ್ಯಾಪಿಸಿದೆ. ಭಾರತದ ಜೀವ ವೈವಿಧ್ಯದ ತಾಣಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.  ಈ ಉದ್ಯಾನವನವು ಪ್ರಸ್ತುತ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಇದು ನೀಲಗಿರಿ ತಹರ್ ನಂತಹ ಜೀವಿಗಳನ್ನು ಒಳಗೊಂಡು ಜೀವವೈವಿಧ್ಯದ ತಾಣವಾಗಿ ಪ್ರವಾಸಿಗರನ್ನು ರಂಜಿಸುತ್ತಿದೆ.

ಈ ರಾಷ್ಟ್ರೀಯ ಉದ್ಯಾನವನವು ತನ್ನ ನೆರೆ ಹೊರೆಯಲ್ಲಿ ಚಿನ್ನಾರ್ ಮತ್ತು ಇಂದಿರಾ ಗಾಂಧಿ ವನ್ಯಜೀವಿಧಾಮಗಳನ್ನು ಹೊಂದಿದ್ದು, ಪಶ್ಚಿಮ ಘಟ್ಟದ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಇವುಗಳ ಜೊತೆಗೆ ಈ ಉದ್ಯಾನವನವು ಕೆಲವು ನದಿಗಳ ಜಲಾನಯನ ಪ್ರದೇಶವನ್ನು ಹೊಂದಿದೆ.

ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮೂರು ವಲಯಗಳಲ್ಲಿ ವಿಂಗಡಿಸಲ್ಪಟ್ಟಿದೆ. ಸಾರವತ್ತ ವಲಯ,  ಸಂಪರ್ಕ ವಲಯ ಮತ್ತು ಪ್ರವಾಸಿ ವಲಯ ಎಂದು ಮೂರು ವಲಯಗಳಲ್ಲಿ ಇದು ವಿಂಗಡಿಸಲ್ಪಟ್ಟಿದೆ. ಪ್ರವಾಸಿಗರಿಗೆ ರಾಜಮಲದಲ್ಲಿರುವ ಪ್ರವಾಸಿ ವಲಯಕ್ಕೆ ಮಾತ್ರ ಪ್ರವೇಶಾವಕಾಶವನ್ನು ನೀಡಲಾಗುತ್ತದೆ. 26 ಜಾತಿಯ ಸಸ್ತನಿಗಳು  ಮತ್ತು 132 ಜಾತಿಯ ಪಕ್ಷಿಗಳನ್ನು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಿಸಲಾಗಿದೆ. ಜನವರಿ –ಫೆಬ್ರವರಿ ತಿಂಗಳುಗಳ ಕಾಲದಲ್ಲಿ ಇಲ್ಲಿ ಸಂತಾನೋತ್ಪತಿ ಕಾಲವೆಂದು ಪರಿಗಣಿಸಲಾಗಿರುವುದರಿಂದಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡುವುದನ್ನು ನಿರ್ಭಂಧಿಸಲಾಗಿದೆ.  ಮಳೆಗಾಲದಲ್ಲಿ ಇಲ್ಲಿ ವೀಕ್ಷಕರ ಪ್ರವೇಶವನ್ನು ನಿರಾಕರಿಸಲಾಗಿದೆ.

 

One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed