ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು ಕಂಗ್ಸಬತಿ ನದಿ ದಡದಲ್ಲಿ ನೆಲೆಗೊಂಡಿರುವ ಈ ಪಟ್ಟಣ, ರಾಜ್ಯದ ರಾಜಧಾನಿ ಕೋಲ್ಕತಾ ಸಾಮೀಪ್ಯದಲ್ಲಿರುವ ಗದ್ದಲಮಯ ಪ್ರವಾಸಿ ತಾಣವಾಗಿದೆ.
ಮಿಡ್ನಾಪೋರ್ ಹೆಸರಿನ ಬಗೆಗಿನ ರಹಸ್ಯ!
ಪಟ್ಟಣದ ಹೆಸರಿನ ಬಗ್ಗೆ ಗಮನಿಸುವುದಾದರೆ ಒಂದು ಆಸಕ್ತಿಕರ ವಿಷಯವೆಂದರೆ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದವರು ತಮ್ಮದೇ ಕಥೆಯನ್ನು ಹೇಳುತ್ತಾರೆ. ಹಿಂದೂಗಳು ಇಲ್ಲಿನ ಸ್ಥಳೀಯ ದೇವತೆ ಮೇದಿನಿ ಮಾತಾಳಿಂದಾಗಿ ಈ ಪಟ್ಟಣಕ್ಕೆ ಈ ಹೆಸರಿಡಲಾಗಿದೆ ಎಂದು ನಂಬುತ್ತಾರೆ. ಹಾಗೆಯೇ ಇಲ್ಲಿನ ಮುಸ್ಲಿಮರು ಇಲ್ಲಿ ಮಸೀದಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಮತ್ತು ಗಣನೀಯವಾಗಿ ಮುಸ್ಲಿಂ ಜನಸಂಖ್ಯೆ ತೀರ್ಥಯಾತ್ರೆಗಾಗಿ ಮದೀನಾಕ್ಕೆ ಬರುತ್ತಿದ್ದ ಕಾರಣದಿಂದ ಈ ಪಟ್ಟಣಕ್ಕೆ ಈ ಹೆಸರಿಡಲಾಗಿದೆ ಎಂದು ನಂಬುತ್ತಾರೆ.
ಮಿಡ್ನಾಪೋರ್ ಸುತ್ತಲಿನ ಪ್ರವಾಸಿ ಸ್ಥಳಗಳ/ ಆಕರ್ಷಣೆಗಳು
ಮಿಡ್ನಾಪೋರ್ ಪ್ರವಾಸೋದ್ಯಮ ಇಲ್ಲಿನ ಐತಿಹಾಸಿಕ ಆಕರ್ಷಣೆಯಿಂದಾಗಿ ಸಾಕಷ್ಟು ಪ್ರಸಿದ್ಧವಾಗಿದೆ. ಉದಾ: ಶಿವನ ಚಪಲೇಶ್ವರ ದೇವಾಲಯ, ಜಗನ್ನಾಥ ದೇವಸ್ಥಾನ ಮತ್ತು ಮಸೀದಿಗಳು ಮತ್ತು ದರ್ಗಾಗಳು, ಕಾಳಿ ದೇವತೆಯನ್ನು ಪೂಜಿಸುವ ಬಟ್ಟಲಾ ದೇವಾಲಯ ಮೊದಲಾದವು. ಪಶ್ಚಿಮಬಂಗಾಳ ನಗರಗಳಲ್ಲಿನ ದುರ್ಗಾ ಪೂಜೆ, ಸರಸ್ವತಿ ಪೂಜೆ ಮತ್ತು ಪೂಜಾ ಕಾಳಿ ಸಂದರ್ಭದಲ್ಲಿ ಅನೇಕರು ಇಲ್ಲಿಗೆ ಆಗಮಿಸುತ್ತಾರೆ. ಈ ಪಟ್ಟಣ ಪೂಜೆ ಮತ್ತು ಉತ್ಸವಗಳಲ್ಲಿ ಪೆಂಡಾಲ್ಸ್ ಮತ್ತು ಶಾಮಿಯಾನ ಹಾಗೂ ಅನೇಕ ವಿವಿಧ ವರ್ಣಗಳಿಂದ ಕಂಗೊಳಿಸುತ್ತಿರುತ್ತದೆ.
ಮಿಡ್ನಾಪೋರ್ ನ ಶಿಕ್ಷಣ
ಇಲ್ಲಿನ ಆಕರ್ಷಣೆಯ ಹೊರತಾಗಿ, ಮಿಡ್ನಾಪೋರ್, ದೊಡ್ಡ ನಗರಗಳ ಹಾಗೂ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೆಲವು ಪ್ರಮುಖ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ನೆಲೆಯಾಗಿದೆ. ನಗರದಲ್ಲಿ ನಿರ್ಮಾಣಗೊಂಡಿರುವ ಮತ್ತು ಚೆನ್ನಾಗಿ ನಿರ್ಮಹಿಸುತ್ತಿರುವ ಉದ್ಯಾನವನನಗಳಲ್ಲಿ ಸ್ಥಳೀಯರು ಬೆಳಿಗ್ಗೆ ಮತ್ತು ಸಂಜೆಯ ಸಮಯವನ್ನು ಇಲ್ಲಿ ಆನಂದಿಸುತ್ತಾರೆ.
ಮಿಡ್ನಾಪೋರ್ ತಲುಪಲು ಹೇಗೆ?
ಮಿಡ್ನಾಪೋರ್ ಪಟ್ಟಣವು ವಿಮಾನ, ರಸ್ತೆ ಮತ್ತು ರೈಲು ಸಾರಿಗೆ ಮಾರ್ಗಗಳ ಮೂಲಕ ಇತರ ಪ್ರಮುಖ ಸ್ಥಳಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ .


Click it and Unblock the Notifications