ಈ ದೇವಾಲಯದ ಆಟಚಲ ವಾಸ್ತುಶಿಲ್ಪ ಹಾಗು ಟೆರ್ರಾಕೊಟ್ಟಾ ವಿನ್ಯಾಸ ಭೇಟಿ ನೀಡಿದ ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.
ಸೂರ್ಯ ದೇವತೆಯನ್ನು ಇಲ್ಲಿ ಮುಖ್ಯವಾಗಿ ಪೂಜಿಸಲಾಗುತ್ತದೆ. ಕಪ್ಪು ಶಿಲೆಯಲ್ಲಿ ಸೂರ್ಯ ದೇವರ ಮೂರ್ತಿಯನ್ನು ಕೆತ್ತಲಾಗಿದೆ. 10 ರಿಂದ 11 ನೇಯ ಶತಮಾನದ ಮಧ್ಯದಲ್ಲಿ ಇದು ನಿರ್ಮಾಣಗೊಂಡಿದೆ ಎನ್ನಲಾಗಿದೆ.