ಲಬ್ರಂಗ್ ಮಠ ದ ವಾಚ್ಯಾರ್ಥ 'ಲಾಮ ಅವರ ಆವಾಸ' ಎಂದಾಗಿದೆ. ಇದನ್ನು 1814 ರಲ್ಲಿ ಕಟ್ಟಲಾಯಿತು. ಇಲ್ಲಿ, ಟಿಬೆಟಿನ ಬೌದ್ಧ ಧರ್ಮದ,ನ್ಯಿಂಗ್ಮಪ ಶಾಲೆಯ ಸಿದ್ಧಾಂತಗಳನ್ನು ಪಾಲಿಸಲಾಗುತ್ತದೆ. ಈ ಮಠವನ್ನು ಟಿಬೆಟಿನ ಕೊಂಗ್ಪುವಿನ ಲತ್ಸುನ್ ಚೆಮ್ಬೋ ಅವರ ಸ್ಮರಣಾರ್ಥ ಕಟ್ಟಿಸಲಾಗಿದ್ದು, ಇವರನ್ನು ಸಿಕ್ಕಿಂ ನಲ್ಲಿ ಬೌದ್ಧ ಶಾಲೆಯ ಸ್ಥಾಪಕರೆಂದು ಸ್ಮರಿಸಲಾಗುತ್ತದೆ. ಲಬ್ರಂಗ್ ಮಠದ ಪಕ್ಕದಲ್ಲಿ ಫದೊಂಗ್ ಮಠ ಕೂಡ ಇದೆ.
ಸಿಕ್ಕಿಂನಲ್ಲಿ ಬಹುಪಾಲು ಮಠಗಳು ಬೆಂಕಿ ಅವಗಢದಿಂದ ತಮ್ಮ ಮೂಲರೂಪವನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಒಂದು ಮಠವು ಅಂತಹ ಯಾವುದೆ ಅವಗಢಕ್ಕೆ ಈಡಾಗದೆ ತನ್ನ ಮೂಲ ಸ್ವರೂಪವನ್ನು ಯಥಾವತ್ತಾಗಿ ಉಳಿಸಿಕೊಂಡಿದೆ.
ಇದರ ಒಳಾಂಗಣದಲ್ಲಿ ಕಾಣಬಹುದಾದ ಮೂರಲ್ ಪೇಂಟಿಂಗ್ ಪದ್ಮಸಂಭವರ ಪ್ರಸಿದ್ಧ ಭಂಗಿಯೊಂದನ್ನು 1022 ಬಾರಿ ಪ್ರದರ್ಶಿಸುತ್ತದೆ. ಇದರ ಮೇಲಂತಸ್ತಿನಲ್ಲಿ ರುಂಡಗಳ ಮಾಲೆಯನ್ನು ಧರಿಸಿದ ವಿಗ್ರಹವೊಂದನ್ನು ಕಾಣಬಹುದು. ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಚಮ್ ನೃತ್ಯವನ್ನು ಇಲ್ಲಿ ಏರ್ಪಡಿಸಲಾಗುತ್ತದೆ.


Click it and Unblock the Notifications