ಪಂಡೋಹ್ ಜಲಾಶಯವನ್ನು ಬಿಯಾಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದೊಂದು ಜಲವಿದ್ಯುತ್ ಯೋಜನೆಯ ಜಲಾಶಯವಾಗಿದ್ದು, ಸಮುದ್ರ ಮಟ್ಟದಿಂದ 76 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಕುಲ್ಲು ಮತ್ತು ಮನಾಲಿ ನಗರಗಳು ಈ ಜಲ ವಿದ್ಯುತ್ ಯೋಜನೆಯಿಂದ ವಿದ್ಯುತ್ತನ್ನು ಪಡೆಯುತ್ತಿವೆ. ಮನಾಲಿಯಿಂದ ಕುಲ್ಲುಗೆ ಸಾಗುವ ಹಾದಿಯಲ್ಲಿ ಕಂಡು ಬರುವ ಈ ಜಲಾಶಯವು ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯಲು ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ. ಭಾಕ್ರ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ)ಯು ಈ ಜಲಾಶಯದ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.


Click it and Unblock the Notifications