ಜನಪ್ರಿಯ ಪ್ರವಾಸಿ ತಾಣದಲ್ಲಿ ನರ್ಗು ವನ್ಯಜೀವಿ ಧಾಮ ಕೂಡ ಒಂದು. ಇದು ಮಂಡಿಯ ಉಹಲ್ ನದಿಯ ದಡದ ಮೇಲಿದೆ. ಬರೋಗ್ ಎಂಬ ಊರಿನಲ್ಲಿ ಈ ಧಾಮವಿದೆ. ಕುಲ್ಲುವಿನಿಂದ ಟ್ರೆಕ್ಕಿಂಗ್ ಮೂಲಕ ಇಲ್ಲಿಗೆ ತಲುಪಬಹುದು. ಸಾಕಷ್ಟು ಪ್ರಾಣಿ-ಪಕ್ಷಿಗಳ ಸಂಕುಲವು ಇಲ್ಲಿವೆ. ಹಿಮಾಲಯದ ಕಪ್ಪು ಕರಡಿ, ಮುಸ್ಕ್ ಜಿಂಕೆ, ಬಾರ್ಕಿಂಗ್ ಜಿಂಕೆ, ಶೇರ್ವಾಗಳು, ಮೋನಲ್ ಪಕ್ಷಿ, ಗೋರಿಲ್ಲಾ ಮತ್ತಿತರ ಪ್ರಾಣಿಗಳ ಇಲ್ಲಿ ಕಾಣಬಹುದು. ಇಲ್ಲಿನ ತಾಲುತ್‌ಕೋಡ್ ಹಾಗೂ ಸಿಬಾಂದ್‌ವಾನಿಗಳಲ್ಲಿ ವಾಸ್ತವ್ಯಕ್ಕೆ ಅನುಕೂಲವಾಗುವ ವಿಶ್ರಾಂತಿ ಧಾಮಗಳು ಇವೆ. ಇವನ್ನು ಪ್ರವಾಸಿಗರು ಉಪಯೋಗಿಸಿಕೊಳ್ಳಬಹುದು. ಏಪ್ರಿಲ್ ನಿಂದ ಮೇ ಹಾಗೂ ಆಗಸ್ಟ್ ನಿಂದ ಅಕ್ಟೋಬರ್ ನಡುವಿನ ಕಾಲ ಈ ಪ್ರದೇಶದ ಭೇಟಿಗೆ ಸರಿಯಾದ ಸಮಯ.


Click it and Unblock the Notifications