ಮಲ್ಶೆಜ್ ಘಾಟ್ ತನ್ನಲ್ಲಿರುವ ಅನುಪಮವಾದ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರಾಕೃತಿಕ ಅದ್ಭುತಗಳಲ್ಲಿ ಮಲ್ಶೆಜ್ ಜಲಪಾತವು ಸಹ ಒಂದು.
ಮಳೆಗಾಲದಲ್ಲಿ ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುವ ಮಲ್ಶೆಜ್ ಜಲಪಾತವು ನೋಡುಗರಿಗೆ ಸ್ವರ್ಗ ಸದೃಶ್ಯವಾಗಿ ಗೋಚರಿಸುತ್ತದೆ. ನೀರಿನ ಜಲಧಾರೆ ಮತ್ತು ವರ್ಷಧಾರೆ ಎರಡೂ ಸೇರಿ ಪ್ರಕೃತಿಯ ಸೊಬಗಿಗೆ ಮೆರಗನ್ನು ಒದಗಿಸುತ್ತವೆ. ಈ ಕಾಲದಲ್ಲಿ ಮಲ್ಶೆಜ್ ಜಲಪಾತವನ್ನು ಒಮ್ಮೆ ನೋಡಿದರೆ ನೀವು ಜೀವನದಲ್ಲಿ ಮತ್ತೆಂದು ಅದನ್ನು ಮರೆಯಲಾರಿರಿ.


Click it and Unblock the Notifications