ಮಲಂಪುಳಾ ರಾಕ್ ಗಾರ್ಡನ್ ಭಾರತದ ಎರಡನೇ ಅತಿ ದೊಡ್ಡ ಕಲ್ಲಿನ ಉದ್ಯಾನವನವಾಗಿದ್ದು ಮಲಂಪುಳಾ ಅಣೆಕಟ್ಟಿನ ಸಮೀಪದಲ್ಲಿದೆ. ಈ ಕಲಾಕೃತಿಯನ್ನು ಪ್ರಖ್ಯಾತ ಶಿಲ್ಪಿ ಮತ್ತು ಪದ್ಮಶ್ರೀ ವಿಜೇತ ನೆಕ್ ಚಂದ್ ಸೈನಿ ವಿನ್ಯಾಸಗೊಳಿಸಿದ್ದಾರೆ. ಇದು ವಿಶ್ವದ ಎಲ್ಲೆಡೆಯಿಂದ ಮನ್ನಣೆ ಪಡಿದಿದೆ ಹಾಗೂ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇಲ್ಲಿನ ಕಲಾಕೃತಿಗಳನ್ನು, ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕ್ಯಾನ್ಗಳು, ಬಳೆ ಚೂರುಗಳು, ವಿದ್ಯುತ್ ಫ್ಯೂಸ್ ವಾಹಕಗಳು ವಿದ್ಯುತ್ ನಿರೋಧಕಗಳು, ಮೆಲಮೈನ್ ಮುಂತಾದ ತ್ಯಾಜ್ಯ ವಸ್ತುಗಳಿಂದ ಮಾಡಲಾಗಿದೆ. ಸುತ್ತಮುತ್ತಲಿನ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು ಈ ಉದ್ಯಾನದ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
1996 ರಿಂದ, ಈ ಸ್ಥಳವು ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯ ಆಡಳಿತಕ್ಕೆ ಒಳಪಟ್ಟಿದೆ.


Click it and Unblock the Notifications