ಪಾಳಮುದಿರಚೋಲೈ ಇದು ಸುಬ್ರಮಣ್ಯ ಅಥವಾ ಮುರುಗ ದೇವತೆಯ ಪ್ರಸಿದ್ಧ ದೇವಸ್ಥಾನವಾಗಿದೆ. ಸುಬ್ರಮಣ್ಯ ಸ್ವಾಮಿಯು ಹಿಂದು ಧರ್ಮದ ಪ್ರಮುಖ ದೇವತೆಗಳಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಸುಬ್ರಮಣ್ಯ ಸ್ವಾಮಿಯು ಶಿವ ಪಾರ್ವತಿಯರ ಜೇಷ್ಠ ಪುತ್ರ. ಈ ದೇವಸ್ಥಾನವು ಸೋಲೈಮಲೈ ಬೆಟ್ಟಗಳ ಮೇಲೆ ನೆಲೆಸಿದ್ದು,ಅಲ್ಗಾರ್ ಕೋಯಿಲ್ ದೇವಸ್ಥಾನದ ಹತ್ತಿರದಲ್ಲಿದೆ.
ಸುಬ್ರಮಣ್ಯ ಸ್ವಾಮಿಯ ಭೂಮಿಯ ಮೇಲಿನ ಪವಿತ್ರ ನಿವಾಸಗಳಲ್ಲಿ ಈ ದೇವಸ್ಥಾನವು ಸ್ಥಾನ ಪಡೆದಿದೆ. ಪ್ರತಿ ದಿನ ಸಾಯಂಕಾಲದ ಸಮಯದಲ್ಲಿ ಸುಬ್ರಮಣ್ಯ ಸ್ವಾಮಿಗೆ ಪೂಜೆ ಮತ್ತು ಮಂಗಳಾರತಿಗಳನ್ನು ಸಲ್ಲಿಸಿ, ಸುಬ್ರಮಣ್ಯ ಸ್ವಾಮಿಯ ಮೂರ್ತಿಯನ್ನ ಸುವರ್ಣ ರಥದಲ್ಲಿ ಇಟ್ಟು ದೇವಸ್ಥಾನದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ. ಈ ಸಮಯದಲ್ಲಿ ಸಹಸ್ರಾರು ಭಕ್ತರ ಗುಂಪೆ ಅಲ್ಲಿ ನೆರೆದಿರುತ್ತದೆ. ನೈಸರ್ಗಿಕ ನೀರಿನ ಬುಗ್ಗೆಯಾದ ನಾಬುರಗಂಗೈ ಪಾಳಮುದಿರಚೋಲೈ ದೇವಸ್ಥಾನದ ಹತ್ತಿರದಲ್ಲಿದೆ.
ಈ ದೇವಸ್ಥಾನಕ್ಕೆ ಬರುವ ಈ ನೀರಿನ ಬುಗ್ಗೆಯಲ್ಲಿ ಸ್ನಾನವನ್ನು ಮಾಡಿ ಮನರಂಜನೆಯನ್ನು ಪಡೆಯುತ್ತಾರೆ. ದೇವಸ್ಥಾನದ ಒಳಗಡೆ ದೇವತೆಗಳ ಅನೇಕ ಶಿಲ್ಪ ಮತ್ತು ವಿಗ್ರಹಗಳನ್ನು ಮಾರ್ಬಲ್ ಮತ್ತು ಬೆಲೆಬಾಳುವ ಕಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇಲ್ಲಿ ನೀವು ತುಂಬ ದೊಡ್ಡದಾದ ಅನೇಕ ಮೆಟ್ಟಿಲುಗಳನ್ನು ನೋಡಬಹುದು. ಭಕ್ತರು ಈ ದೇವಸ್ಥಾನದ ಒಳಗಡೆ ಹೋಗಲು ಈ ಮೆಟ್ಟಿಲುಗಳನ್ನು ದಾಟಿಯೇ ಹೋಗಬೇಕು.


Click it and Unblock the Notifications