ಸಿಕಂದರ್ ಬಾಗ್ ಹೆಸರೇ ಹೇಳುವಂತೆ ಒಂದು ಉದ್ಯಾನವನ್ನು ಸೂಚಿಸುತ್ತದೆ. ಇದರ ಆವರಣದಲ್ಲಿ ಒಂದು ಬಂಗಲೆ ಕೂಡ ಇದೆ. ಅವಧ್ ನ ನ ಅಂತಿಮ ನವಾಬ ನವಾಬ್ ವಜಿದ್ ಅಲಿ ಷಾ ಇದನ್ನು ಬೇಸಿಗೆಯ ಅರಮನೆಯಾಗಿ ನಿರ್ಮಿಸಿದ. ಈ ಗಾರ್ಡನ್ ಗೆ ಅಲೆಕ್ಸಾಂಡರ್ ದ ಗ್ರೇಟ್ ಅಥವಾ ಷಾ ನ ಪತ್ನಿ ಸಿಕಂದರ್ ಮಹಲ್ ಬೇಗಂ ಹೆಸರಿಟ್ಟಿದ್ದನಾ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ.
ವರ್ಣರಂಜಿತ ವ್ಯಕ್ತಿಯಾಗಿದ್ದ ನವಾಬ್ ವಜಿದ್ ಅಲಿ ಷಾ, ಈ ಗಾರ್ಡನ್ ನ ಮಧ್ಯಭಾಗದಲ್ಲಿ ಪೆವಿಲಿಯನ್ ಒಂದನ್ನು ನಿರ್ಮಿಸಿದ್ದ. ಇದರಲ್ಲಿ ಕುಳಿತುಕೊಂಡು ಆತ ರಾಸ್ ಲೀಲಾ, ಕಥಕ್ ಡ್ಯಾನ್ಸ್, ಸಂಗೀತ ಮತ್ತು ಮುಶೈರಾ ಹಾಗೂ ಇತರ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನವನ್ನು ನೋಡುತ್ತಿದ್ದ.
1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಈ ಬಾಗ್ ನ್ನು ಬ್ರಿಟಿಷರ ಸೇನೆ ವಿರುದ್ಧ ಹೋರಾಡಲು ಭದ್ರಕೋಟೆಯನ್ನಾಗಿ ಮಾಡಲಾಯಿತು. ಲಖನೌ ಗೆ ಮುತ್ತಿಗೆ ಸಮಯದಲ್ಲಿ ಸುಮಾರು 2200 ಮಂದಿ ಸೈನಿಕರಿಗೆ ಇದು ಆತಿಥ್ಯ ವಹಿಸಿತ್ತು. ಕಮಾಂಡರ್ ಇನ್ ಚೀಫ್ ಸರ್ ಕಾಲಿನ್ ಕ್ಯಾಂಪೆಲ್ ಮುಂದಾಳತ್ವದಲ್ಲಿ ಬ್ರಿಟಿಷ್ ಸೇನೆ ಹಲವಾರು ಮಂದಿಯನ್ನು ಹತ್ಯೆ ಮಾಡಿತ್ತು. ಇತಿಹಾಸ ಪುಟಗಳನ್ನು ಸೇರಿರುವ ಈ ಬಾಗ್ ಭಾರತದ ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಕೇಂದ್ರದ ನೆಲೆಯಾಗಿದೆ.


Click it and Unblock the Notifications