Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಜುಮಾ ಮಸೀದಿ

ಜುಮಾ ಮಸೀದಿ, ಲಖನೌ

3

ಮೂರು ಗುಮ್ಮಟಗಳು ಮತ್ತು ಎರಡು ಮಸೀದಿ ಸ್ತಂಭ ಗೋಪುರಗಳಿರುವ ಜುಮಾ ಮಸೀದಿ ಲಖನೌದಲ್ಲಿ ಅವಧ್ ನವಾಬರ ಯುಗದ ಐಷಾರಾಮಿ ಮತ್ತು ಐಶ್ವರ್ಯಕ್ಕೆ ಗಮನಾರ್ಹ ಸಾಕ್ಷಿಯಾಗಿದೆ. ನವಾಬ್ ಮೊಹಮ್ಮದ್ ಅಲಿ ಷಾ ದೇಶದಲ್ಲಿನ ಎಲ್ಲಾ ವಾಸ್ತುವಿನ್ಯಾಸ ಮತ್ತು ಭವ್ಯತೆಯನ್ನು ಮೀರಿಸುವ ಮಸೀದಿಯನ್ನು ನಿರ್ಮಿಸಲು ಬಯಸಿದ. ಆದಾಗ್ಯೂ ಸಂಧಿವಾತದಿಂದ ಬಳಲಿದ ಅಲಿ ಷಾ 1842ರಲ್ಲಿ ನಿಧನರಾದರು ಮತ್ತು ಅವರ ಕನಸಿನ ಯೋಜನೆ ಪೂರ್ಣಗೊಳ್ಳುವ ತನಕ ಬದುಕುಳಿಯಲಿಲ್ಲ. ಈ ಮಸೀದಿಯನ್ನು ಆತನ ಪತ್ನಿ ಬೇಗಂ ಮಲ್ಲಿಕ ಜೆಹಾನ್ ಪೂರ್ಣಗೊಳಿಸಿದರು.

ಈ ಭವ್ಯ ಮಸೀದಿ ಸುಮಾರು 4950 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿದ್ದು, ವಾಸ್ತು ವಿನ್ಯಾಸ, ಸೊಗಸಾದ ಅಲಂಕಾರಗಳು, ಕೆತ್ತನೆಗಳು ಮತ್ತು ಮಸೀದಿ ಹೊರಗೋಡೆಗಳಲ್ಲಿನ ಕ್ಯಾಲಿಗ್ರಫಿಯಲ್ಲಿ ಹಿಂದೂ ಮತ್ತು ಜೈನ ದೇವಸ್ಥಾನಗಳ ಪ್ರಭಾವವಿದೆ. ಚಿನ್ನದ ಹೊಳಪಿನ ಕನ್ನಡಿಗಳು, ಬೆಳ್ಳಿಯ ಪೀಠ,  ಮೊಘಲ್ ಶೈಲಿಯ ಹಸಿಚಿತ್ರಗಳು ಮತ್ತು ಅದ್ಭುತ ದೀಪಗುಚ್ಛಗಳಿಂದ ಒಳಗೋಡೆಗಳು  ಅಲಂಕೃತವಾಗಿದೆ.

ಕಮಾನಿನಂತಿರುವ ಮಸೀದಿಯ ಗುಮ್ಮಟವು ಸುಮಾರು 260 ಕಂಬಗಳ ಮೇಲೆ ನಿಂತಿದೆ. ಕಟ್ಟಡದ ಪೂರ್ವ ಭಾಗದಲ್ಲಿ ಅಹ್ಮದ್ ಷಾ ಸಮಾಧಿಯಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri