Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಹವಾಮಾನ

ಲಖನೌ ಹವಾಮಾನ

ಉತ್ತರ ಭಾರತದ ಇತರ ನಗರಗಳಂತೆ ಲಖನೌ ನಲ್ಲಿ ಕೂಡ ಬಿಸಿ ಶುಷ್ಕ ತಾಪಮಾನ ಮತ್ತು ಧೂಳಿನ ಬೇಸಿಗೆ ಹಾಗೂ ಮೈ ನಡುಗಿಸುವ ಚಳಿಗಾಲವಿರುತ್ತದೆ. ಬೇಸಿಗೆಕಾಲದ ತಿಂಗಳಾದ ಮೇ ಮತ್ತು ಜೂನ್ ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತನಕ ಏರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಲಖನೌಗೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಬೇಸಿಗೆ ಕಾಲವಿರುತ್ತದೆ ಮತ್ತು ಈ ಸಮಯದಲ್ಲಿ ಗರಿಷ್ಠ ತಾಪಮಾನ ಮತ್ತು ಬಿಸಿ ಹಾಗೂ ಒಣ ಗಾಳಿಯಿರುತ್ತದೆ. ಇಲ್ಲಿನ ತಾಪಮಾನ ಸುಮಾರು 45 ಡಿಗ್ರಿ ಸೆಲ್ಸಿಯಸ್ ತನಕ ಏರುತ್ತದೆ.

ಮಳೆಗಾಲ

ಜುಲೈನಿಂದ ಸಪ್ಟೆಂಬರ್ ತನಕ ಮಳೆಗಾಲವಿರುತ್ತದೆ. ಆಗ್ಗಾಗ್ಗೆ ಭಾರೀ ಮಳೆಯಾಗುವ ಲಕ್ಷಣಗಳಿರುತ್ತದೆ. ಈ ಸಮಯದಲ್ಲಿ ಹವಾಮಾನ ತೇವ ಹಾಗೂ ಆರ್ದ್ರವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತನಕ ಚಳಿಗಾಲವಿರುತ್ತದೆ. ತಾಪಮಾನ 12 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯುವ ಕಾರಣ ಹವಾಮಾನ ತಂಪು ಹಾಗೂ ಹಿತಕರವಾಗಿರುತ್ತದೆ. ಜನವರಿ ತಿಂಗಳಲ್ಲಿ ದಟ್ಟ ಮಂಜು ಆವರಿಸುವ ಕಾರಣ ವಿಮಾನಗಳು ರದ್ದುಗೊಂಡು, ರೈಲು ಸಂಚಾರ ವಿಳಂಬವಾಗುತ್ತದೆ.