Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಮೋತಿ ಮಹಲ್

ಮೋತಿ ಮಹಲ್, ಲಖನೌ

1

ನಮ್ಮ ದೇಶದಾದ್ಯಂತ ಹಲವಾರು ಮೋತಿ ಮಹಲ್‍ಗಳಿವೆ. ಅವುಗಳಲ್ಲಿ ಬಹುತೇಕವು ಉಪಾಹಾರ ಮಂದಿರ ಮತ್ತು ಹೋಟೆಲ್‍ಗಳು. ಆದರೆ ಲಖನೌದ ಮೋತಿ ಮಹಲ್ ಅವಧ್‍ನ ನವಾಬರ ನಿವಾಸವಾಗಿತ್ತು. ಜೊತೆಗೆ ಇದನ್ನು ಮುತ್ತಿನ ಅರಮನೆ ಎಂಬ ಹೆಸರಿನಿಂದ ಸಹ ಕರೆಯಲಾಗುತ್ತದೆ. ಈ ಮೋತಿ ಮಹಲ್ ಗೋಮ್ಟಿ ನದಿಯ ತೀರದಲ್ಲಿರುವ ರಾಣ ಪ್ರತಾಪ್ ರಸ್ತೆಯಲ್ಲಿ, ಹಜರತ್‍ಗಂಜ್ ಕ್ರೀಡಾಂಗಣಕ್ಕೆ ಅಭಿಮುಖವಾಗಿ ನೆಲೆಗೊಂಡಿದೆ. ಇದರ ರಚನೆಯು ಮುತ್ತನ್ನು ಹೋಲುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಮೋತಿ ಮಹಲನ್ನು ನವಾಬ್ ಸಾದತ್ ಅಲಿಖಾನ್ ಇದನ್ನು ನಿರ್ಮಿಸಿದನು. ಈ ಕಟ್ಟಡವನ್ನು ನವಾಬನು ತನ್ನ ಕುಟುಂಬ ಸದಸ್ಯರು ನದಿಯ ಆಚೆ ದಂಡೆಯಲ್ಲಿ ನಡೆಯುವ ಪ್ರಾಣಿಗಳ ಕಾಳಗಗಳನ್ನು ನೋಡಿ ಆನಂದಿಸುವ ಸಲುವಾಗಿ ನಿರ್ಮಿಸಿದನು. ಅವಧ್‍ನ ನವಾಬರು ಪಕ್ಷಿ ಪ್ರೇಮಿಗಳು. ಈ ಸ್ಥಳದಿಂದ ಅವರು ವೈವಿಧ್ಯಮಯ ಪಕ್ಷಿಗಳ ಹಾರಾಟವನ್ನು ನೋಡಿ ಆನಂದಿಸುತ್ತಿದ್ದರು. ಆದಾಗಿಯೂ ಇದರ ಮುಂಭಾಗವನ್ನು ದುರ್ಗಗಳಲ್ಲಿ ನಿರ್ಮಿಸುವ ಕೋಟೆಯ ಮುಂಭಾಗದಂತೆ ನಿರ್ಮಿಸಲಾಗಿದೆ. ಇದು ಶತ್ರುಗಳ ಚಲನವಲನ ಮತ್ತು ಕಾರ್ಯಾಚರಣೆಯನ್ನು ಗಮನಿಸಲು ಬಳಕೆಯಾಗುತ್ತಿತ್ತ್.

ನವಾಬನು ಈ ಅರಮನೆಯಲ್ಲಿ ಶಾ ಮಂಜಿಲ್ ಮತ್ತು ಮುಬಾರಕ್ ಮಂಜಿಲ್ ಎಂಬ ಇನ್ನೆರಡು ಹೊಸ ರಚನೆಗಳನ್ನು ನಿರ್ಮಾಣ ಮಾಡಿದನು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun