Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಸ್ಮಾರಕ ಮ್ಯೂಸಿಯಂ (ಶಹೀದ್ ಸ್ಮಾರಕ್)

ಸ್ಮಾರಕ ಮ್ಯೂಸಿಯಂ (ಶಹೀದ್ ಸ್ಮಾರಕ್), ಲಖನೌ

1

ಭಾರತದ ಜನರ ಹೋರಾಟ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಖನೌ ಜನರ ಪಾತ್ರವನ್ನು ಸ್ಮರಣೀಯವಾಗಿರಿಸಲು 1857ರ ಸ್ಮಾರಕ ಮ್ಯೂಸಿಯಂನ್ನು ನಿರ್ಮಿಸಲಾಯಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾರ್ಯಕ್ರಮಗಳಿಗೆ ಲಖನೌ ಪ್ರಮುಖ ಕೇಂದ್ರವಾಗಿತ್ತು.

ರೆಸಿಡೆನ್ಸಿ ಬಿಲ್ಡಿಂಗ್ ನ ಆನೆಕ್ಸ್ ನಲ್ಲಿರುವ ಮ್ಯೂಸಿಯಂ ಸ್ವಾತಂತ್ರ್ಯ ಸಂಗ್ರಾಮದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ವಾಸಸ್ಥಾನದ ಉತ್ಖನನ ವೇಳೆ ಪತ್ತೆ ಹಚ್ಚಲಾದ ಹಸ್ತಕೃತಿಗಳು, ಗುಂಡುಗಳಿಂದ ತುಂಬಿರುವ ರಿವಾಲ್ವರ್, ಪಿಂಗಾಣಿ ವಸ್ತುಗಳು, ವೈನ್ ಬಾಟಲಗಳು, ದಾಖಲೆಗಳು, ಛಾಯಾಚಿತ್ರಗಳು, ವರ್ಣಚಿತ್ರಗಳು, ಗುರಾಣಿಗಳು, ಶಿಲಾಮುದ್ರಣಗಳು, ಶಸ್ತ್ರಾಸ್ತ್ರಗಳು, ಫಿರಂಗಿ ಚೆಂಡುಗಳು, ಶಸ್ತ್ರಾಸ್ತ್ರ ಸಾಮಗ್ರಿ, ಗನ್, ಫಿರಂಗಿಗಳು, ಹಗುರ ಬಂದೂಕುಗಳು, ಬ್ಯಾಡ್ಜ್ ಗಳು ಮತ್ತು ಇತರ ಕೆಲವು ಪ್ರಮುಖ ಅಂಶಗಳು ಈ ಸ್ಮಾರಕದಲ್ಲಿವೆ.

ಸ್ವಾತಂತ್ರ್ಯ ಹೋರಾಟದ ಘಟನೆಗಳ ವ್ಯವಸ್ಥಿತ ಮತ್ತು ಕಾಲಾನುಕ್ರಮದಲ್ಲಿ ಈ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿರುವ ಕೆಲವು ನಕ್ಷೆಗಳು ಲಖನೌನ ಆಯಕಟ್ಟಿನ ಸ್ಥಳಗಳು ಮತ್ತು ರೆಸಿಡೆನ್ಸಿ ನಕ್ಷೆ ಮತ್ತು ಮಾದರಿಗಳನ್ನು ತೋರಿಸುತ್ತದೆ. ಕಟ್ಟಡದ ನೆಲಮಹಡಿ ಮತ್ತು ಬೇಸ್ ಮೆಂಟ್ ನಲ್ಲಿ ಈ ಮ್ಯೂಸಿಯಂ ಇದೆ. ನೆಲಮಹಡಿಯಲ್ಲಿ ನಾಲ್ಕು ಗ್ಯಾಲರಿಗಳು ಮತ್ತು ಬೇಸ್ ಮೆಂಟ್ ನಲ್ಲಿ ಏಳು ಗ್ಯಾಲರಿಗಳಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue