Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಲಖನೌ ಪ್ರಾಣಿ ಸಂಗ್ರಹಾಲಯ

ಲಖನೌ ಪ್ರಾಣಿ ಸಂಗ್ರಹಾಲಯ, ಲಖನೌ

2

ಲಖನೌ ನಗರದ ಕೇಂದ್ರ ಭಾಗದಲ್ಲಿ ಸುಮಾರು 72 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನೆಲೆಗೊಂಡಿರುವ ಲಖನೌ ಪ್ರಾಣಿ ಸಂಗ್ರಹಾಲಯ ಅಥವಾ ಚಿಡಿಯಾಘರ್ ಇಲ್ಲಿನ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಒಂದು ಅಂದಾಜಿನ ಪ್ರಕಾರ ಲಖನೌ ಪ್ರಾಣಿ ಸಂಗ್ರಹಾಲಯಕ್ಕೆ ಪ್ರತಿ ವರ್ಷ ಹತ್ತು ಲಕ್ಷದಷ್ಟು ವೀಕ್ಷಕರು ಭೇಟಿ ನೀಡುತ್ತಾರೆ.

ಈ ಸಂಗ್ರಹಾಲಯದಲ್ಲಿ ವೈವಿಧ್ಯಮಯವಾದ ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳು ಮತ್ತು ಸಸ್ತನಿಗಳನ್ನು ನಾವು ಕಾಣಬಹುದು. ರಾಯಲ್ ಬೆಂಗಲ್ ಹುಲಿ, ಸಿಂಹಗಳು, ತೋಳಗಳು, ಹಿಮಾಲಯನ್ ಕಪ್ಪು ಕರಡಿ, ಖಡ್ಗ ಮೃಗ, ಕಪ್ಪು ಜಿಂಕೆಗಳು,ಝೀಬ್ರಾ, ಮೈನಾಗಳು, ಏಶ್ಯಾದ ಆನೆ, ಜಿರಾಫೆ, ದೊಡ್ಡ ಅಳಿಲುಗಳು ಹಾಗು ಇತ್ಯಾದಿ ಪ್ರಾಣಿಗಳನ್ನು ನಾವು ಇಲ್ಲಿ ನೋಡಬಹುದು. ಇದರ ಜೊತೆಗೆ ಈ ಮೃಗಾಲಯದಲ್ಲಿ ಜಿಂಕೆ,ಕಪ್ಪು ಜಿಂಕೆ, ಹೊಂಬಣ್ಣದ ನವಿಲುಗಳು, ಬಿಳಿ ಹುಲಿಗಳು ಮತ್ತು ಇತ್ಯಾದಿ ಪ್ರಾಣಿ - ಪಕ್ಷಿಗಳ ಸಂತಾನೋತ್ಪತಿಯನ್ನು ಸಹ ಮಾಡಲಾಗುತ್ತದೆ.

ಇಲ್ಲಿ ಒಂದು ಪುಟಾಣಿ ರೈಲಿದ್ದು, ಮಕ್ಕಳಿಗು ಮತ್ತು ವಯಸ್ಕರಿಗು ಮುದವನ್ನು ನೀಡಲು ನೆರವಾಗುತ್ತಿದೆ. ರೈಲ್ವೇ ಮಂಡಳಿಯು ಕೊಡುಗೆಯಾಗಿ ನೀಡಿರುವ ಈ ರೈಲಿಗೆ ಒಂದು ಇಂಜಿನ್ ಮತ್ತು ಎರಡು ಕೋಚ್‍ಗಳಿವೆ. ಈ ರೈಲು ಚಂದೆರ್ಪುರಿ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರವನ್ನು ಕ್ರಮಿಸುತ್ತದೆ. ತನ್ನ ಪ್ರಯಾಣಾವಧಿಯಲ್ಲಿ ಈ ರೈಲು ಮೃಗಾಲಯದ ಬಹುತೇಕ ಪ್ರಮುಖ ಸ್ಥಳಗಳನ್ನು ಒಳಗೊಂಡ ಮಾರ್ಗವನ್ನು ಕ್ರಮಿಸುವುದು ಇದರ ವಿಶೇಷವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed