Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಕುಕ್ರೈಲ್ ವನ್ಯಧಾಮ

ಕುಕ್ರೈಲ್ ವನ್ಯಧಾಮ, ಲಖನೌ

1

ಕುಕ್ರೈಲ್ ವನ್ಯಧಾಮವು ಲಖನೌನ ಶಿವ್‍ಪುರಿ ಕಾಲೋನಿ ಬಳಿಯಿರುವ ಇಂದ್ರನಗರದಲ್ಲಿದೆ. ಈ ಅರಣ್ಯದಲ್ಲಿ ಮೊಸಳೆ ಸೇರಿದಂತೆ ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿಗಳನ್ನು ನಾವು ನೋಡಬಹುದು. ಅದರಲ್ಲಿಯೂ ಈ ವನ್ಯಧಾಮದಲ್ಲಿ ಅಳಿವಿನಂಚಿನಲ್ಲಿರುವ ಮೊಸಳೆಗಳ ಸಂತಾನೋತ್ಪತಿಯ ಪ್ರದೇಶಗಳನ್ನು ನಾವು ನೋಡಬಹುದು. ಹೆಣ್ಣು ಮೊಸಳೆಯು ಈ ವನ್ಯಧಾಮದಲ್ಲಿ ಹರಿಯುವ ನದಿ ದಂಡೆಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. 60 ರಿಂದ 80 ದಿನಗಳ ನಂತರ ಅವುಗಳಿಂದ ಮರಿಗಳು ಒಡೆದು ಹೊರಗೆ ಬರುತ್ತವೆ. 1978ರಲ್ಲಿ ಕುಕ್ರೈಲಿನಲ್ಲಿ ಮೊಸಳೆಗಳ ಸಂತಾನೋತ್ಪತಿ ಕೇಂದ್ರವನ್ನು ತೆರೆಯುವ ಆಲೋಚನೆ ಮೂಡಿಬಂತು.

ಈ ಕೇಂದ್ರಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಉತ್ತರ್ ಪ್ರದೇಶ್ ಅರಣ್ಯ ಇಲಾಖೆ ಧನ ಸಹಾಯ ಮಾಡುತ್ತಿದೆ. ಇಲ್ಲಿ ಮೊಸಳೆಗಳ ಜೊತೆಗೆ ಜಿಂಕೆ, ಚುಕ್ಕೆ ಜಿಂಕೆ ಮತ್ತು ವಿಶೇಷವಾಗಿ ಸಾಂಬರ್ ಗಳನ್ನು ನಾವು ಕಾಣಬಹುದು. ಈ ವನ್ಯಧಾಮವು ಭಾರೀ ಸಂಖ್ಯೆಯ ಪಕ್ಷಿಗಳಿಗೆ ಆಶ್ರಯವನ್ನೊದಗಿಸಿದೆ. ಇಲ್ಲಿ ದೇಶೀಯ ಮತ್ತು ವಲಸೆ ಹಕ್ಕಿಗಳ ದೊಡ್ಡ ಸಮೂಹವನ್ನೆ ನಾವು ನೋಡಬಹುದು.

ಈ ಅರಣ್ಯವು ವಿಹಾರಕ್ಕೆಂದು ಬರುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಉಪಾಹಾರ ಗೃಹಗಳು, ಕಾಫೀ ಕೇಂದ್ರಗಳು ಮತ್ತು ವಿಶ್ರಾಂತಿ ತಾಣಗಳು ಇವೆ. ಇದರ ಜೊತೆಗೆ ಮಕ್ಕಳಿಗಾಗಿ ಹಲವಾರು ಉಯ್ಯಾಲೆಗಳಿರುವ ಉದ್ಯಾನವನಗಳು ಸಹ ಇಲ್ಲಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue