ಕುಕ್ರೈಲ್ ವನ್ಯಧಾಮವು ಲಖನೌನ ಶಿವ್‍ಪುರಿ ಕಾಲೋನಿ ಬಳಿಯಿರುವ ಇಂದ್ರನಗರದಲ್ಲಿದೆ. ಈ ಅರಣ್ಯದಲ್ಲಿ ಮೊಸಳೆ ಸೇರಿದಂತೆ ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿಗಳನ್ನು ನಾವು ನೋಡಬಹುದು. ಅದರಲ್ಲಿಯೂ ಈ ವನ್ಯಧಾಮದಲ್ಲಿ ಅಳಿವಿನಂಚಿನಲ್ಲಿರುವ ಮೊಸಳೆಗಳ ಸಂತಾನೋತ್ಪತಿಯ ಪ್ರದೇಶಗಳನ್ನು ನಾವು ನೋಡಬಹುದು. ಹೆಣ್ಣು ಮೊಸಳೆಯು ಈ ವನ್ಯಧಾಮದಲ್ಲಿ ಹರಿಯುವ ನದಿ ದಂಡೆಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. 60 ರಿಂದ 80 ದಿನಗಳ ನಂತರ ಅವುಗಳಿಂದ ಮರಿಗಳು ಒಡೆದು ಹೊರಗೆ ಬರುತ್ತವೆ. 1978ರಲ್ಲಿ ಕುಕ್ರೈಲಿನಲ್ಲಿ ಮೊಸಳೆಗಳ ಸಂತಾನೋತ್ಪತಿ ಕೇಂದ್ರವನ್ನು ತೆರೆಯುವ ಆಲೋಚನೆ ಮೂಡಿಬಂತು.
ಈ ಕೇಂದ್ರಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಉತ್ತರ್ ಪ್ರದೇಶ್ ಅರಣ್ಯ ಇಲಾಖೆ ಧನ ಸಹಾಯ ಮಾಡುತ್ತಿದೆ. ಇಲ್ಲಿ ಮೊಸಳೆಗಳ ಜೊತೆಗೆ ಜಿಂಕೆ, ಚುಕ್ಕೆ ಜಿಂಕೆ ಮತ್ತು ವಿಶೇಷವಾಗಿ ಸಾಂಬರ್ ಗಳನ್ನು ನಾವು ಕಾಣಬಹುದು. ಈ ವನ್ಯಧಾಮವು ಭಾರೀ ಸಂಖ್ಯೆಯ ಪಕ್ಷಿಗಳಿಗೆ ಆಶ್ರಯವನ್ನೊದಗಿಸಿದೆ. ಇಲ್ಲಿ ದೇಶೀಯ ಮತ್ತು ವಲಸೆ ಹಕ್ಕಿಗಳ ದೊಡ್ಡ ಸಮೂಹವನ್ನೆ ನಾವು ನೋಡಬಹುದು.
ಈ ಅರಣ್ಯವು ವಿಹಾರಕ್ಕೆಂದು ಬರುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಉಪಾಹಾರ ಗೃಹಗಳು, ಕಾಫೀ ಕೇಂದ್ರಗಳು ಮತ್ತು ವಿಶ್ರಾಂತಿ ತಾಣಗಳು ಇವೆ. ಇದರ ಜೊತೆಗೆ ಮಕ್ಕಳಿಗಾಗಿ ಹಲವಾರು ಉಯ್ಯಾಲೆಗಳಿರುವ ಉದ್ಯಾನವನಗಳು ಸಹ ಇಲ್ಲಿವೆ.


Click it and Unblock the Notifications