Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಹಜರತ್ ಗಂಜ್ ಮಾರ್ಕೆಟ್

ಹಜರತ್ ಗಂಜ್ ಮಾರ್ಕೆಟ್, ಲಖನೌ

1

ಲಖನೌ ನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಒಂದಾಗಿರುವ ಹಜರತ್ ಗಂಜ್ ಮಾರ್ಕೆಟ್ ನಗರದ ಮಧ್ಯಭಾಗದಲ್ಲಿರುವ ಹಜರತ್ ಗಂಜ್ ಪ್ರದೇಶ ಪರಿವರ್ತನ್ ಚೌಕ್ ನಲ್ಲಿದೆ. 1810ರಲ್ಲಿ ಇದನ್ನು ಅಮ್ಜದ್ ಷಾ ನಿರ್ಮಿಸಿದ್ದ. ಹಿಂದೆ ಬ್ರಿಟಿಷರು ತಮ್ಮ ಗಾಡಿಗಳೊಂದಿಗೆ ಪ್ರಯಾಣಿಸುತ್ತಿದ್ದ ಕ್ವೀನ್ಸ್ ವೇಯಲ್ಲಿ ಈ ಮಾರುಕಟ್ಟೆಯಿತ್ತು.  ಕಾಲಾನಂತರದಲ್ಲಿ ಇದಕ್ಕೆ ಕಿರಿದಾದ, ಅಂಕುಡೊಂಕಾದ ರಸ್ತೆಗಳು ಸೇರ್ಪಡೆಯಾದವು.

2010-11ರಲ್ಲಿ ರಸ್ತೆಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಅಳವಡಿಸಲಾದ ದೀಪಗಳು, ಕಾರಂಜಿಗಳು ಮತ್ತು ಬೆಂಚುಗಳಿಂದಾಗಿ ಈ ರಸ್ತೆಯ ವಿಕ್ಟೋರಿಯನ್ ಯುಗದ ಪರಿಸರವನ್ನು ನೆನಪಿಸುತ್ತದೆ.ಹಜರತ್ ಗಂಜ್ ಮಾರ್ಕೆಟ್ ನಲ್ಲಿ ಬಜಾರ್, ಶಾಪಿಂಗ್ ಮಾಲ್ಸ್, ಕ್ಲಾಸಿ ಶೋರೂಮ್, ಹೋಟೆಲ್ಸ್, ಪಿವಿ ಆರ್ ಫಿಲ್ಮ್ ಥಿಯೇಟರ್, ಫನ್ ಸಿನೆಮಾಸ್, ರೆಸ್ಟೋರೆಂಟ್ಸ್, ಫುಡ್ ಕೋರ್ಟ್ಸ್ ಮತ್ತು ಆಫೀಸ್ ಗಳಿವೆ.

ಯಾವುದೇ ವಸ್ತುಗಳು ಬೇಕಿದ್ದರೂ ಇಲ್ಲಿ ಪಡೆಯಬಹುದು. ವಿನೂತನ ಕಾರುಗಳು, ಜ್ಯುವೆಲ್ಲರಿ, ಪ್ರಾಚೀನ ಹಾಗೂ ಸಂಗ್ರಾಹ್ಯ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಲಖನೌದ ಪ್ರಸಿದ್ಧ ಚಿಕ್ನಕನ್ ವಸ್ತುಗಳು ಇಲ್ಲಿ ಲಭ್ಯವಿದೆ. ಗ್ರಾಹಕ ಉತ್ಪನ್ನಗಳ ಹಲವಾರು ಬ್ರಾಂಡ್ ಗಳಾದ ಬಿಗ್ ಬಜಾರ್ ಸೂಪರ್ ಸ್ಟೋರ್, ಗುರ್ಜರಿ ಹ್ಯಾಂಡ್ ಲೂಮ್ಸ್ ಎಂಪೊರಿಯಮ್, ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಗಾಂಧಿ ಆಶ್ರಮ್ಸ್ ಮತ್ತು ಸುಮಾರು 425000 ಚದರ ಅಡಿ ಪ್ರದೇಶದಲ್ಲಿರುವ ಐದು ಮಳಿಗೆಗಳ ಸಹಾರ ಗಂಜ್ ಮಾಲ್ ಗಳಿಗೆ ಈ ಮಾರುಕಟ್ಟೆ ನೆಲೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed