ಲೋಹಗಡ್ ಕೋಟೆ ಎಂದರೆ ಹೆಸರೆ ಹೇಳುವಂತೆ ಕಬ್ಬಿಣದ ಕೋಟೆ ಎಂದರ್ಥ. ಲೋಣಾವಲದ ಸಹ್ಯಾದ್ರಿ ಶ್ರೇಣಿಯಲ್ಲಿರುವ ಅತ್ಯಂತ ಪುರಾತನ ಕೋಟೆಯಿದು. ಇದು ಇಂದ್ರಯಾನಿ ಮತ್ತು ಪಾವ್ನಾದಿಂದಾಗಿ ವಿಭಾಗಗೊಂಡಿದೆ. ಇದನ್ನು ನಿರ್ಮಿಸಿದ್ದು ಛತ್ರಪತಿ ಶಿವಾಜಿ. ಇದು ವಿದರ್ಭ ಮತ್ತು ಮರಾಠಾ ರಾಜರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಲವು ರಾಜಮನೆತನಗಳ ತಾಣವಾಗಿತ್ತು.
ನಿಮಗೆ ವಾಸ್ತುಶಿಲ್ಪ, ಇತಿಹಾಸದಲ್ಲಿ ಅತ್ಯಂತ ಆಸಕ್ತಿ ಇದ್ದಲ್ಲಿ ಈ ಪ್ರದೇಶವನ್ನು ನೋಡದೇ ಬಿಡಬೇಡಿ. ಇಲ್ಲಿರುವ ನಾಲ್ಕು ಪ್ರವೇಶದ್ವಾರಗಳು ಅತ್ಯಂತ ವಿಶಿಷ್ಟವಾದದ್ದು ಮತ್ತು ಇಂದಿಗೂ ಈ ದ್ವಾರಗಳು ಸುಸ್ಥಿತಿಯಲ್ಲಿರುವುದು ಪ್ರವಾಸಿಗರನ್ನು ಅಶ್ಚರ್ಯಗೊಳಿಸುತ್ತದೆ.


Click it and Unblock the Notifications