ಲಾತೂರ್ ಮತ್ತು ನಾಂದೇಡ್ ಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಚಾಕೂರ್ ಎಂಬ ತಾಣವಿದ್ದು ಇದು, ಭಗವಾನ್ ಶಿವನಿಗೆ ಸಮರ್ಪಿತವಾದ ದೇವಸ್ಥಾನವೊಂದಕ್ಕೆ ಪ್ರಸಿದ್ಧವಾಗಿದೆ. ಈ ಪ್ರದೇಶವು ಸಾಮಾನ್ಯವಾಗಿ ವಿಧ ವಿಧವಾದ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳಿಗೆ ಬಹಳ ಪ್ರಸಿದ್ಧವಾಗಿದೆ. ಚಾಕೂರ್, ಲಾತೂರ್ ನಿಂದ ಸುಮಾರು 35 ಕಿ.ಮೀ. ದೂರದಲ್ಲಿದ್ದು, ಎಲ್ಲವೂ ಸರಿಯಾಗಿದ್ದರೆ, ಹೆದ್ದಾರಿಯ ಮೂಲಕ ಇಲ್ಲಿಗೆ ತಲುಪಲು ಕೇವಲ 30 ನಿಮಿಷಗಳ ಅವಧಿಯು ಸಾಕಾಗುತ್ತದೆ. ಪುಟಾಣಿಗಳೊಂದಿಗೆ ಜೊತೆಗೂಡಿರುವ ಪ್ರವಾಸಿಗರಿಗಾಗಿ, ಚಾಕೂರ್ ಗೆ ಸನಿಹದಲ್ಲಿ ಒಂದು ಮನೋರಂಜನಾ ಉದ್ಯಾನವೂ ಕೂಡ ಇದೆ.


Click it and Unblock the Notifications