ಭೀಮ್ ಪಕೋರಾ, ಲಾನ್ಸ್ ಡೌನ್

ಭೀಮ್ ಪಕೊರಾ ಲಾನ್ಸ್ ಡೌನ್ ನಲ್ಲಿರುವ ಗಾಂಧಿ ಚೌಕ್ ದಿಂದ ಸುಮಾರು 2 ಕಿ. ಮೀ ದೂರದಲ್ಲಿರುವ ಒಂದು ಐತಿಹಾಸಿಕ ಆಕರ್ಷಣೆಯಾಗಿದೆ. ದಂತಕಥೆಗಳ ಪ್ರಕಾರ, ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಪೌರಾಣಿಕ ಪಾತ್ರಗಳಾದ ಪಾಂಡವರು, ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ತಮ್ಮ ಆಹಾರವನ್ನು ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಕಲ್ಲಿನ ಮೇಲೆ ಕಲ್ಲನ್ನು ಇರಿಸಲಾಗಿದ್ದು ಅದನ್ನು ಸ್ವತಃ ಐದು ಜನ ಪಾಂಡವರಲ್ಲಿ ಒಬ್ಬನಾದ ಭೀಮನೆ ಇರಿಸಿದ್ದನೆಂದು ಹೇಳಲಾಗುತ್ತದೆ. ಈ ಮೇಲಿನ ಕಲ್ಲು ಕೆಳಗೆ ಬೀಳದಂತೆ ಸಂಪೂರ್ಣವಾಗಿ ಸರಿತೂಗಿಸಲಾಗಿದೆ. ಒಂದು ಬೆರಳಿನ ಮೂಲಕ ಮೇಲಿನ ಕಲ್ಲನ್ನು ಚಲಿಸುವಂತೆ ಮಾಡಬಹುದಾದರೂ, ಅದು ಕೆಳಗೆ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ.

Please Wait while comments are loading...