ನದಿ ತೀರದ ದಟ್ಟ ಕಾಡಿನಲ್ಲಿರುವ ಈ ದೇವಾಲಯ ಕಸಿಯ -ತಮ್ಕುಹಿ ರಸ್ತೆಯಿಂದ 8 ಕಿ.ಮೀ ಅಂತರದಲ್ಲಿದೆ. ಇದು ಮೂಲ ಹಾಗು ಮೊದಲ ಆದಿ ಶಕ್ತಿ ದೇವಿ ಕುರುಕುಲ್ಲ ದೇವಿಯ ದೇವಾಲಯ. ಇದನ್ನು ನಾಗಾರ್ಜುನನು ಕಟ್ಟಿದನು ಎಂದು ನಂಬಲಾಗಿದೆ.
ಈ ದೇವಾಲಯವು ಅರಣ್ಯ ಪ್ರದೇಶದಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಲೆಸಿದೆ. ಇದು ದಿನನಿತ್ಯದ ಜಂಜಾಟದಿಂದ ವಿಶ್ರಾಂತಿ ಪಡೆಯಲು, ಧ್ಯಾನ ಮಗ್ನರಾಗ ಬಯಸುವ ಮತ್ತು ಮನಸ್ಸಿನ ಶಾಂತಿಗಾಗಿ ಬರುವ ಪ್ರವಾಸಿಗರಿಗೆ ನೆಚ್ಚಿನ ತಾಣ. ಆದ್ದರಿಂದ ಕುರುಕುಲ್ಲ ದೇವಾಲಯ ಧ್ಯಾನ ದೇವಾಲಯ ಎಂದೇ ಹೆಸರುವಾಸಿಯಾಗಿದೆ.


Click it and Unblock the Notifications