Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಗುರುದ್ವಾರ ಚೆವಿನ್ ಪಟ್‍ಶಾಹಿ

ಗುರುದ್ವಾರ ಚೆವಿನ್ ಪಟ್‍ಶಾಹಿ, ಕುರುಕ್ಷೇತ್ರ

1

ಗುರುದ್ವಾರ ಚೆವಿನ್ ಪಟ್‍ಶಾಹಿಯನ್ನು ಸಿಖ್ಖರ ಆರನೆಯ ಗುರುವಾದ ಶ್ರೀ ಹರ್ ಗೋಬಿಂದ್‍ರವರ ನೆನಪಿಗಾಗಿ ನಿರ್ಮಿಸಲಾಗಿರುವ ಮಂದಿರವಾಗಿದೆ. ಇವರು ಇಲ್ಲಿಗೆ ತಮ್ಮ ಸೇನೆಯ ಸಹಿತ ಭೇಟಿ ನೀಡಿದ್ದರಂತೆ. ಆಗ ಇಲ್ಲಿನ ಹಲವರು ಅದು ಹೇಗೆ ಒಬ್ಬ ಆಯುಧಪಾಣಿಯಾದ ಸೈನಿಕನು ಗುರುನಾನಕರ ಪೀಳಿಗೆಯ ಉತ್ತರಾಧಿಕಾರಿಯಾಗುತ್ತಾನೆ ಎಂದು ಬೆರಗಾಗಿದ್ದರು. ಆಗ ಈ ಗುರುಗಳು ಅದು ಹೇಗೆ ಭಕ್ತಿಯು ಮತ್ತು ಶಕ್ತಿಯು ಸಂಬಂಧವನ್ನು ಹೊಂದಿವೆ ಎಂದು ವಿವರಿಸಿ ಹೇಳಿದ್ದರು.

ಈ ಗುರುದ್ವಾರದ ನಿರ್ಮಾಣದ ಕಾರ್ಯವು 1909ರಲ್ಲಿ ಶುರುವಾಯಿತು. ಆದರೆ ಇದರ ಮುಖ್ಯ ಕಟ್ಟಡವು ನಂತರ ನಿರ್ಮಾಣಗೊಂಡಿತು. ಇಲ್ಲಿನ ಪ್ರಮುಖ ಕಟ್ಟಡದಲ್ಲಿ ಕಮಲದಾಕಾರದ ಗುಮ್ಮಟದ ಕೆಳಗಿನ ವೇದಿಕೆಯ ಮೇಲೆ ಗುರು ಗ್ರಂಥ್ ಸಾಹಿಬ್ ಅನ್ನು ಇಡಲಾಗಿದೆ. ಇಲ್ಲಿನ ಅಮೃತ ಶಿಲೆಯ ಪೀಠವು ಆ ಪವಿತ್ರ ಗ್ರಂಥವನ್ನು ಸುತ್ತುವರೆದಿದೆ.

ಬಹುತೇಕ ಎಲ್ಲಾ ಗುರುದ್ವಾರಗಳಂತೆಏ ಈ ಗುರುದ್ವಾರದಲ್ಲಿಯು ಸಹ ಒಂದು ಸರೋವರ ಅಥವಾ ಕಲ್ಯಾಣಿಯನ್ನು ಭಕ್ತಾಧಿಗಳಿಗಾಗಿ ನಿರ್ಮಿಸಲಾಗಿದೆ. ಭಕ್ತಾಧಿಗಳಿಗೆ ಇಲ್ಲಿ ಲಂಗರ್ - ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.

ಗುರುದ್ವಾರ ಚೆವಿನ್ ಪಾಟ್‍ಶಾಹಿಯು ಕುರುಕ್ಷೇತ್ರದ ಅತ್ಯಂತ ಹಳೆಯ ಗುಡಿಗಳಲ್ಲಿ ಒಂದಾಗಿದೆ. ಇದನ್ನು ಕುರುಕ್ಷೇತ್ರ - ಥಾನೇಶ್ವರ್ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಇದು ರೈಲು ನಿಲ್ದಾಣಕ್ಕೆ ಸಮೀಪದಲ್ಲಿಯೇ ನೆಲೆಗೊಂಡಿರುವುದರಿಂದ ಪ್ರವಾಸಿಗರಿಗೆ ತಲುಪಲು ಸುಲಭವಾಗುತ್ತದೆ. ಈ ಗುರುದ್ವಾರವನ್ನು ಇದರ ನಿರ್ಮಾತೃಗಳು ವಿಶಾಲವಾಗಿ ನಿರ್ಮಿಸಿರುವುದಷ್ಟೇ ಅಲ್ಲದೆ ಅಷ್ಟೇ ಅಚ್ಚು ಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun