Search
  • Follow NativePlanet
Share
ಮುಖಪುಟ » ಸ್ಥಳಗಳು» ಕುರುಡುಮಲೆ

ಕುರುಡುಮಲೆ- ದೇವರುಗಳು ಭೇಟಿಯಾಗುವ ಸ್ಥಳ.

6

ಕುರುಡುಮಲೆಯು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದ್ದು, ಪ್ರಸಿದ್ಧ ಯಾತ್ರಾ ಸ್ಥಳವೆಂದು ಖ್ಯಾತಿ ಪಡೆದಿದೆ. ಕುರುಡು ಮಲೆಯ ಗಣಪತಿ ಮೂರ್ತಿಯು ಅತ್ಯಂತ ಪ್ರಭಾವಶಾಲಿ ಮೂರ್ತಿಯೆಂದು ಹೆಸರಾಗಿದೆ. ದಂತಕಥೆಗಳ ಪ್ರಕಾರ ಈ ಗಣಪತಿ ಮೂರ್ತಿಯನ್ನು  ಸಾಕ್ಷಾತ್ ತ್ರಿಮೂರ್ತಿಗಳು ಪ್ರತಿಷ್ಟಾಪಿಸಿದರೆಂದು ತಿಳಿದು ಬಂದಿದೆ. ಈ ವಿಗ್ರಹದ ಸುತ್ತಲು ದೇವಾಲಯವನ್ನು ವಿಜಯನಗರದ ಅರಸರು ಕಟ್ಟಿಸಿದರು.

 

ಕುರುಡುಮಲೆಯ ಕುರಿತಾದ ದಂತಕಥೆಗಳು

ಕುರುಡು ಮಲೆಯ ಸುತ್ತಲು ಇರುವ ಇನ್ನಿತರ ದಂತಕಥೆಗಳು ಹೀಗಿವೆ, ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ಭಾವಿಸಲಾಗಿದೆ.

 

ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ  ನಿರ್ಮಿಸಲಾಗಿದೆ. ಇದರ ಕುರಿತು ದಂತಕಥೆಗಳಿದ್ದು ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.

ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ. ಇದರ ನಿರ್ಮಾಣ ಕಾಲವು ನಮ್ಮನ್ನು ಚೋಳರ ಆಡಳಿತ ಕಾಲದಷ್ಟರವರೆಗು ಕೊಂಡೊಯ್ಯುತ್ತದೆ.

ಕುರುಡುಮಲೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ  ಸುಲಭವಾಗಿ ತಲುಪಬಹುದು.

ಕುರುಡುಮಲೆ ಪ್ರಸಿದ್ಧವಾಗಿದೆ

ಕುರುಡುಮಲೆ ಹವಾಮಾನ

ಉತ್ತಮ ಸಮಯ ಕುರುಡುಮಲೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುರುಡುಮಲೆ

  • ರಸ್ತೆಯ ಮೂಲಕ
    ಬೆಂಗಳೂರಿನಿಂದ ಕುರುಡುಮಲೆಗೆ ನಿತ್ಯ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಹೊರಡುತ್ತಿರುತ್ತವೆ. ಕರ್ನಾಟಕದ ಇತರ ಭಾಗಗಳಿಂದ ಕುರುಡುಮಲೆಗೆ ನಿಯಮಿತವಾಗಿ ಬಸ್ಸುಗಳ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹಾವೇರಿ ಇಲ್ಲಿಗೆ ಸಮೀಪದ ರೈಲುನಿಲ್ದಾಣ ವಾಗಿದ್ದು, ಇದು ಕುರುಡುಮಲೆಯಿಂದ 10 ಕಿ.ಮೀ ದೂರದಲ್ಲಿದೆ. ಈ ರೈಲು ನಿಲ್ದಾಣದ ಮೂಲಕ ದೇಶದ ಪ್ರಮುಖ ರೈಲುಗಳು ಬಂದು ಹೊರಡುತ್ತವೆ. ಪ್ರವಾಸಿಗರು ಇಲ್ಲಿಂದ ಬಾಡಿಗೆ ವಾಹನಗಳಲ್ಲಿ ಅಥವಾ ಬಸ್ಸುಗಳಲ್ಲಿ ಕುರುಡುಮಲೆಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು , ದೇಶಿಯ ಮತ್ತು ವಿದೇಶಿಯ ಪ್ರವಾಸಿಗರಿಗೆ ವಿಮಾನ ಯಾನ ಸೌಲಭ್ಯವನ್ನು ಒದಗಿಸುತ್ತದೆ. ಇದು ಈ ಊರಿನಿಂದ 110 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu