Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಡುಮಲೆ » ಹವಾಮಾನ

ಕುರುಡುಮಲೆ ಹವಾಮಾನ

ಪ್ರವಾಸಿಗರು ಯಾವುದೆ ಸಮಯದಲ್ಲಿ ಕುರುಡುಮಲೆಗೆ ಭೇಟಿ ನೀಡಬಹುದಾಗಿದ್ದರೂ, ಮಳೆಗಾಲದಲ್ಲಿ ಇಲ್ಲಿ ತಂಪಾದ ಮತ್ತು ಹಿತವಾದ ವಾತಾವರಣವಿರುವುದರಿಂದ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

 (ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಕುರುಡುಮಲೆಯ ವಾತಾವರಣ ಒಣ ಬಿಸಿಲಿನಿಂದ ಕೂಡಿರುತ್ತದೆ. ಈ ಪ್ರಾಂತ್ಯವು ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗೆ ಮಳೆಯನ್ನು ಸಹಾ ಕಾಣುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ತೀಕ್ಷ್ಣ ಬಿಸಿಲಿನಿಂದ ಕೂಡಿದ್ದು ಉಷ್ಣಾಂಶವು 30° ಸೆಲ್ಶಿಯಸ್ ನಿಂದ 38° ಸೆಲ್ಶಿಯಸ್ ವರೆಗೆ ಏರಿಕೆ ಕಾಣುತ್ತದೆ.

ಮಳೆಗಾಲ

 (ಜೂನ್ ನಿಂದ ಸೆಪ್ಟಂಬರ್): ಕುರುಡುಮಲೆಯಲ್ಲಿ ನೈಋತ್ಯ ಮತ್ತು ವಾಯುವ್ಯ ಮಾನ್ಸೂನ್ ಮಾರುತಗಳಿಂದಾಗಿ ಸ್ವಲ್ಪ ಮಟ್ಟಿಗೆ ಮಳೆ ಬೀಳುತ್ತದೆ. ಈ ಕಾಲದಲ್ಲಿ ಇಲ್ಲಿ ತಂಪಾದ ಮತ್ತು ಹಿತವಾದ ವಾತಾವರಣವಿರುವುದರಿಂದ ಪ್ರವಾಸಿಗರು ಕುರುಡುಮಲೆಗೆ ಈ ಸಮಯದಲ್ಲಿ ಭೇಟಿಕೊಡುವುದು ಉತ್ತಮ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ ): ಚಳಿಗಾಲದಲ್ಲಿ ಕುರುಡುಮಲೆಯು ತಂಪಾಗಿ ಹಿತವಾದ ವಾತಾವರಣದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 10° ಸೆಲ್ಶಿಯಸ್ ನಿಂದ 30°ಸೆಲ್ಶಿಯಸ ತನಕ ಇರುತ್ತದೆ.