ಅರೇಬಿಯನ್ ಸಮುದ್ರದ ತೀರದಲ್ಲಿರುವ ಕುಮಟಾ ಬೀಚ್ ಹೆಚ್ಚು ಜನಪ್ರಿಯವಾದ್ದು. ಇದು ಕುಮಟಾದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇತರ ಬೀಚ್‌ಗಳಿಗೆ ಹೋಲಿಸಿದರೆ ಈ ಸಮುದ್ರ ತೀರವು ವಿಶಾಲವಾಗಿದೆ. ಸಮುದ್ರ ತೀರದ ಸುತ್ತ ಹಳ್ಳಿಗಳು ಸುತ್ತುವರಿದಿವೆ. ಸಮುದ್ರ ತೀರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಲು ರಸ್ತೆ ಕೂಡಾ ಇದೆ. ಪ್ರವಾಸಿಗರು ಲೈಟ್ ಹೌಸ್, ಬತ್ತದ ಗದ್ದೆ ಮತ್ತು ತೆಂಗು ತೋಟವನ್ನು ಸಮುದ್ರ ತೀರದ ಸುತ್ತ ಕಾಣಬಹುದು. ಬೀಚ್‌ನಿಂದ ಸುಂದರ ನೋಟವನ್ನು ಪ್ರವಾಸಿಗರು ವೀಕ್ಷಿಸಬಹುದು ಮತ್ತು ಹಳ್ಳಿಯಲ್ಲಿರುವ ಹಳೆಯದಾದ ಒಂದು ಚರ್ಚ್‌ನ್ನು ಕೂಡಾ ಪ್ರವಾಸಿಗರು ವೀಕ್ಷಿಸಬಹುದು.


Click it and Unblock the Notifications