ಪರ್ವಾತಾರೋಹಣವು ಕುಲ್ಲುವಿನಲ್ಲಿ ಜರುಗುವ ಪ್ರಸಿದ್ಧ ಸಾಹಸ ಚಟುವಟಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರವಾಸಿಗರು ಸಹ ಪಾಲ್ಗೋಳ್ಳಬಹುದು. ಇದಕ್ಕಾಗಿ ಕುಲ್ಲುವು ಈ ಪ್ರಾಂತ್ಯದ ಹಲವಾರು ಬೆಟ್ಟಗಳನ್ನು ನಿಮಗಾಗಿ ಒದಗಿಸುತ್ತದೆ. ಈ ಸ್ಥಳದಲ್ಲಿ ಇನ್ನು ಯಾರು ಏರಿರದಂತಹ ಪರ್ವತ ಶೃಂಗಗಳು ಇವೆ. ಇವುಗಳಿಗೆ ತಲುಪಲು ಅನುಕೂಲವಾಗುವಂತಹ ಮೂಲ ನೆಲೆಗಳು ಸಹ ಇಲ್ಲಿ ದೊರೆಯುತ್ತವೆ. ಇಲ್ಲಿ ಪರ್ವತಾರೋಹಣ ಮಾಡಲು ಬರುವ ಹೊಸಬರಿಗೆ ಡಿಯೊ ಟಿಬ್ಬ, ಬಿಯಾಸ್ ಕುಂಡ್ ಮತ್ತು ಹನುಮಾನ್ ಟಿಬ್ಬಗಳು ಅನುಕೂಲಕರವಾಗಿವೆ. ಪರಿಣಿತ ಪರ್ವತಾರೋಹಿಗಳಿಗೆ ಚಂದ್ರತಾಲ್, ಬಿಯಾಸ್ ಕುಂಡ್ ಮತ್ತು ಮಲಾನ ಹಿಮನದಿಗಳು ಸವಾಲೆಸೆದು ಕರೆಯುತ್ತಿವೆ. ಆಸಕ್ತರು ಪರ್ವತಾರೋಹಣದ ಸಾಮಾಗ್ರಿ ಹಾಗು ಇನ್ನಿತರ ಹೆಚ್ಚಿನ ಮಾಹಿತಿಯನ್ನು ಮನಾಲಿಯ ಅಲಿಯೊನಲ್ಲಿರುವ ಹಿಮಾಲಯನ್ ಪರ್ವತಾರೋಹಣ ಸಂಸ್ಥೆಯಿಂದ ಪಡೆಯಬಹುದು. ಈ ಇಲಾಖೆಯಿಂದ ಪರ್ವತಾರೋಹಣದ ಕುರಿತಾಗಿ ತರಬೇತಿ ಮತ್ತು ಕೋರ್ಸ್ ಗಳನ್ನು ಸಹ ಒದಗಿಸಲಾಗುತ್ತದೆ.