ಮೀನುಗಾರಿಕೆಯು ಕುಲ್ಲುವಿನ ಅತ್ಯಂತ ಪ್ರಮುಖ ಚಟುವಟಿಕೆಯಾಗಿದೆ. ಇಲ್ಲಿರುವ ನದಿಗಳಲ್ಲಿ ಕಂದು ಮತ್ತು ಕಾಮನಬಿಲ್ಲಿನ ಬಣ್ಣದ ಟ್ರೌಟ್ ಎಂಬ ಸಿಹಿನೀರಿನ ಮೀನುಗಳು ಯಥೇಚ್ಛವಾಗಿ ಕಂಡು ಬರುತ್ತವೆ. ಇದು ಇಲ್ಲಿ ಗಾಳ ಹಾಕಿ ಮೀನು ಹಿಡಿಯುವವರಿಗೆ ಹೇಳಿ ಮಾಡಿಸಿದ ಅವಕಾಶವನ್ನು ಒದಗಿಸುತ್ತದೆ. ಕುಲ್ಲುವಿನಿಂದ 58 ಕಿ.ಮೀ ದೂರದಲ್ಲಿರುವ ಬಂಜರ್ ಎಂಬ ಸ್ಥಳದಲ್ಲಿ ತೀರ್ಥನ್ ಎಂಬ ನದಿಯು ಹರಿಯುತ್ತದೆ. ಇದರ ದಂಡೆಯು ಮೀನುಗಾರಿಕೆಗೆ ಪ್ರಶಸ್ತವಾದ ಸ್ಥಳವಾಗಿದೆ. ನಗ್ಗರ್ ಎಂಬುದು ಈ ಪ್ರಾಂತ್ಯದ ಮತ್ತೊಂದು ಪ್ರಸಿದ್ಧ ಮೀನುಗಾರಿಕೆಯ ತಾಣವಾಗಿದೆ.
ಇದರ ಜೊತೆಗೆ ಪ್ರವಾಸಿಗರು ರಸೊಲ್ ಮತ್ತು ಕಟ್ರೈನ್‍ಗಳಲ್ಲಿಯೂ ಸಹ ಮೀನುಗಾರಿಕೆಯ ಮೋಜನ್ನು ಸವಿಯಬಹುದು. ಎಪ್ರಿಲ್‍ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳುಗಳು ಇಲ್ಲಿ ಮೀನುಗಾರಿಕೆ ಮಾಡಲು ಹೇಳಿ ಮಾಡಿಸಿದ ಸಮಯವಾಗಿದೆ.


Click it and Unblock the Notifications