ಸ್ಕೀಯಿಂಗ್, ಅತ್ಯಂತ ವೇಗವಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಕುಫ್ರಿಯ ಜನಪ್ರಿಯ ಸಾಹಸ ಕ್ರೀಡೆ. ಸಾವಿರಾರು ಪ್ರವಾಸಿಗರು ಫೆಬ್ರವರಿ ತಿಂಗಳಲ್ಲಿ ಪ್ರತಿ ವರ್ಷ ಮಹಾಸು ಬ್ರಿಡ್ಜ್ ಇಳಿಜಾರುಗಳಲ್ಲಿ ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತ, ಆನಂದಿಸಲು ಇಲ್ಲಿಗೆ ಆಗಮಿಸುತ್ತಾರೆ. ಚಳಿಗಾಲದಲ್ಲಿ ಸ್ಕೀ ಉತ್ಸವ ಈ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಸ್ಕಿಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವಾರು ಉತ್ಸಾಹಿಗಳು ಬರುತ್ತಾರೆ. ಇಲ್ಲಿ, ಅನುಭವಿ ತರಬೇತುದಾರರು ಎಲ್ಲಾ ಸ್ಕೀಯಿಂಗ್ ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. ಸ್ಕೀಯಿಂಗ್ ಗೆ ಬೇಕಾದ ಅಗತ್ಯ ಉಪಕರಣಗಳು ಪ್ರವಾಸಿಗರಿಗೆ ಸುಲಭವಾಗಿ ಇಲ್ಲಿ ಲಭ್ಯವಾಗುತ್ತವೆ


Click it and Unblock the Notifications