ಕ್ಯಾಲಿಕಟ್‌ನ ಪ್ರವಾಸಿ ತಾಣಗಳಲ್ಲಿ ಕಲಿಪೋಯಿಕಾ ಕೂಡ ಒಂದು. ಪ್ರಮುಖ ಪ್ರವಾಸಿ ಆಕರ್ಷಣೀಯ ತಾಣವಾಗಿದೆ. ನಗರ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿದೆ. ಇದು ಇಲ್ಲಿನ ಅರಯಿದತ್ತುಪಾಲಂ ಎಂಬ ಸ್ಥಳದಲ್ಲಿದೆ. ನಿತ್ಯ ನೂರಾರು ಮಂದಿಯನ್ನು ಈ ತಾಣ ಆಕರ್ಷಿಸುತ್ತಿದೆ.
ಕಲಿಪೋಯಿಕಾದಲ್ಲಿ ಪ್ರವಾಸಿಗರು ಬೋಟಿಂಗ್‌ನ ಮಜಾ ಪಡೆಯಬಹುದು. ರೋ ಬೋಟ್, ಪೆಡಲ್ ಬೋಟ್‌ಗಳು ಇಲ್ಲಿ ಸಿಗುತ್ತವೆ. ಇದನ್ನು ಬಾಡಿಗೆಗೆ ಪಡೆದು ಪ್ರವಾಸಿಗರು ಬೋಟಿಂಗ್ ಮಜಾ ಅನುಭವಿಸಬಹುದು. ಈ ಪ್ರದೇಶದಲ್ಲಿ ಸಂಜೆಯ ಹೊತ್ತು ಬೋಟಿಂಗ್ ಮಾಡುವುದು ಮಜಾ ಕೊಡುತ್ತದೆ. ಇಲ್ಲಿ ಮಾತ್ರ ಬೆಳಗ್ಗೆ 8 ರಿಂದ ಸಂಜೆ 7ರವರೆಗೂ ಬೋಟಿಂಗ್‌ಗೆ ಅವಕಾಶ ಇರುತ್ತದೆ.
ಕಲಿಪೋಯಿಕಾವು ಸರೋವರಂ ಜೈವಿಕ ಉದ್ಯಾನದ ಒಂದು ಭಾಗವಾಗಿದೆ. ಸರ್ಕಾರದ ಅಧಿನದಲ್ಲಿ ನಡೆಯುತ್ತಿರುವ ಯೋಜನೆ ಇದಾಗಿದೆ. ತೇವ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿರುವ ಸರ್ಕಾರ ಇಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತಿದೆ. ಕಲಿಪೋಯಿಕಾ ಸುತ್ತಲಿನ ಪ್ರದೇಶ ನ್ಯಾಷನಲ್ ವೆಟ್‌ಲ್ಯಾಂಡ್ ಕನ್ಸರ್‌ವೇಶನ್ ಪ್ರೋಗ್ರಾಂ ಅಡಿ ಬರುತ್ತದೆ. ಈ ಯೋಜನೆ ಇನ್ನೂ ಕಾರ್ಯಾಚರಣೆ ಹಂತದಲ್ಲಿದೆ. ಈ ಯೋಜನೆ ಕ್ಯಾನಲ್ ವಾಕ್‌ವೇ, ಬೋಟಿಂಗ್ ಸೌಲಭ್ಯ, ತೆರೆದ ಸಭಾಂಗಣವನ್ನು ಹೊಂದಲಿದೆ.


Click it and Unblock the Notifications