ಕ್ಯಾಲಿಕಟ್ ನಗರದಿಂದ 45 ಕಿ.ಮೀ. ದೂರದಲ್ಲಿ ಕಕ್ಕಾಯಂ ಆಣೆಕಟ್ಟು ಪ್ರದೇಶ ಇದೆ. ವಿಶಾಲವಾದ ಗಿಡ ಮರಗಳಿಂದ ಕೂಡಿರುವ ಪರಿಸರದಲ್ಲಿ ವನ್ಯಜೀವಿಗಳು ಹೇರಳವಾಗಿ ವಾಸಿಸುತ್ತವೆ. ಇದು ಪ್ರವಾಸಿಗರು ಹಾಗೂ ಸಾಹಸಿಗಳನ್ನು ಬಹುವಾಗಿ ಆಕಷರ್ಷಿಸುವ ತಾಣ. ಬಂಡೆ ಏರುವುದು, ಟ್ರೆಕ್ಕಿಂಗ್ ಸೇರಿದಂತೆ ಹತ್ತು ಹಲವು ಸಾಹಸಕಾರಿ ಕ್ರೀಡೆಗೆ ಇಲ್ಲಿ ಹೆಚ್ಚು ಅವಕಾಶ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವ ಈ ಭಾಗ ದಟ್ಟ ಅರಣ್ಯದಿಂದ ಆವೃತ್ತವಾಗಿದೆ.
ಈ ಕಾರಣದಿಂದಲೇ ಇದು ಆಕರ್ಷಕ ಟ್ರೆಕ್ಕಿಂಗ್ ತರಬೇತಿಗೆ ಬಳಕೆ ಆಗುತ್ತಿದೆ. ಅರಣ್ಯ ಇಲಾಖೆ ಪೊಲೀಸರ ವಶದಲ್ಲಿ ಈ ಭಾಗ ಇದೆ. ಈ ಜಲಾವೃತ್ತ ಪ್ರದೇಶ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಜಾಗ. ಕೌಟುಂಬಿಕ ಪ್ರವಾಸ, ಸಾಹಸ ಯಾನ ಹಾಗೂ ಒಂದು ದಿನದ ಪಿಕ್‌ನಿಕ್‌ಗೆ ಉತ್ತಮ ಎನಿಸಿದೆ.
ಕ್ಯಾಲಿಕಟ್‌ನಿಂದ ರಸ್ತೆ ಮಾರ್ಗದಲ್ಲಿ ಕಕ್ಕಾಯಮ್ ತಲುಪಬಹುದು. ಕ್ಯಾಲಿಕಟ್ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಉತ್ತಮವಾಗಿದೆ. ನಿಲ್ದಾಣವನ್ನು ಮೊಫ್ಯೂಸಲ್ ಬಸ್ ನಿಲ್ದಾಣ ಅಂತ ಕೂಡ ಕರೆಯಲಾಗುತ್ತದೆ. ಪ್ರವಾಸಿಗರು ಇಲ್ಲಿಂದಲೇ ಖಾಸಗಿ ಟ್ಯಾಕ್ಸಿಗಳನ್ನೂ ಪಡೆದು ತೆರಬಹುದಾಗಿದೆ.


Click it and Unblock the Notifications