ಮುನ್ರೋಯಿ ಟ್ರುಥ್ ಅನ್ನುವ ಹೆಸರಿನಲ್ಲಿ ಈ ತಾಣ ಗುರುತಾಗಿದೆ. ೮ ಪ್ರತ್ಯೇಕ ದ್ವೀಪಗಳ ಸಮೂಹ ಇದಾಗಿದೆ. ಕೊಲ್ಲಂನಿಂದ ಸುಮಾರು 27 ಕಿ.ಮೀ. ದೂರದಲ್ಲಿದೆ.ಇಲ್ಲಿಗೆ ರಸ್ತೆ ಮಾರ್ಗ ಹಾಗೂ ಬೋಟ್ ಮಾರ್ಗದ ಮೂಲಕ ತೆರಳಬಹುದು. ಕೊಲೋನಿಯಲ್ ಜಾನ್ ಮುನ್ರೋಯ್ ಅವರ ಹೆಸರಿನಲ್ಲಿ ಈ ದ್ವೀಕ ಗುರುತಾಗಿದೆ. ಬ್ರಿಟಿಶ್ ಅಧಿಕಾರಿಗಳು ಈ ಭಾಗವನ್ನು ನೀರಿನ ಕಾಲುವೆ ನಿರ್ಮಿಸಲು ಹಾಗೂ ಹಿನ್ನೀರಿನ ಕ್ರಸಿಂಗ್ ಮಾರ್ಗವಾಗಿ ಬಳಸಿಕೊಂಡಿದ್ದರು.
ಇಂದು ಮುನ್ರೋಯಿ ಅತ್ಯಂತ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದ್ದು, ಪ್ರತಿ ವರ್ಷ ಇದನ್ನು ವೀಕ್ಷಿಸಲೆಂದೇ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಆಕರ್ಷಕ ಸೀನ್‌ಗಳು, ಕಣ್ಮನ ಸೆಳೆಯುವ ಪ್ರದೇಶವನ್ನು ಇದು ಹೊಂದಿದೆ. ಇಲ್ಲಿ ಮೂಲಚಂತರ ಹಾಗೂ ಕಲ್ಲುವೈಲ ಹೆಸರಿನ ಎರಡು ದೇವಾಲಯ ಇದೆ. ಹಾಗೂ 1878 ರಲ್ಲಿ ನಿರ್ಮಿಸಿದ ಚರ್ಚ್ ಕೂಡ ಇದೆ. ಒಟ್ಟಾರೆ ಇಲ್ಲಿನ ಆಕರ್ಷಣೆ ಹಾಗೂ ಸಹಜ ಸೌಂದರ್ಯ ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತಿದೆ.
ಅಷ್ಟಮುಡಿ ಹಿನ್ನೀರು ಕಲಾದ ನದಿಯನ್ನು ಸೇರುವ ತಾಣದಲ್ಲಿ ಈ ಪ್ರದೇಶ ಇದೆ. ಇದೊಂದು ವಿಶಿಷ್ಟ ತಾಣವಾಗಿದ್ದು, ರಜೆ ಕಳೆಯಲು ಪ್ರಶಸ್ತ ಜಾಗ. ಪ್ರವಾಸಿಗರು ಸ್ಥಳ ವೀಕ್ಷಣೆ, ಪಕ್ಷಿ ವೀಕ್ಷಣೆ, ಮೀನುಹಿಡಿಯುವುದರಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಈ ತಾಣ ನಾರು ಕೈಗಾರಿಕೆಗೆ ಹೆಸರುವಾಸಿ. ಪ್ರವಾಸಿಗರು ಸ್ಥಳ ಸೌಂದರ್ಯ ವೀಕ್ಷಣೆ ಜತೆಗೆ ನಾರು ಉತ್ಪನ್ನಗಳನ್ನು ಸಿದ್ಧಪಡಿಸುವುದನ್ನೂ ವೀಕ್ಷಿಸಬಹುದಾಗಿದೆ.


Click it and Unblock the Notifications