ಕೊಲ್ಲಂ ಕಡಲ ತೀರ ಮಹಾತ್ಮ ಗಾಂಧಿ ಬೀಚ್ ಅಂತ ಜನಪ್ರಿಯವಾಗಿದೆ. ಮರಳಿನಿಂದ ಆವೃತ್ತವಾದ ಸುಂದರ ತೀರವನ್ನು ಇದು ಹೊಂದಿದೆ. ಕೊಲ್ಲಂನ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದೆ. ಕೊಲ್ಲಂ ನಗರದಿಂದ ಎರಡು ಕಿ.ಮೀ. ದೂರದಲ್ಲಿರುವ ಕೊಚ್ಚುಪಿಲ್ಲಮ್ಮೋಡು ಎಂಬಲ್ಲಿ ಈ ಕಡಲ ತೀರ ಇದೆ.
ಇದಕ್ಕೆ ಹೊಂದಿಕೊಂಡಂತೆ ಮಹಾತ್ಮ ಗಾಂಧಿ ಉದ್ಯಾನವನ ಇದೆ. ಓಡಾಡಲು ಹಾಗೂ ವಿರಮಿಸಲು ಇದು ಉತ್ತಮ ತಾಣ. ಕಡಲ ತೀರ ಹಾಗೂ ಉದ್ಯಾನ ಆಕರ್ಷಣೆಯ ಕೇಂದ್ರವಾಗಿದ್ದು ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಪಾಮ್ ಮರಗಳ ನಡುವಿನಿಂದ ಹಾಗೂ ಬಿಳಿ ಮರಳಿನ ಮೇಲೆ ಬೀಳುವ ಸೂರ್ಯ ರಶ್ಮಿ ವೀಕ್ಷಣೆಗೆ ಇದು ಜನಪ್ರಿಯ. ಇದಕ್ಕಾಗಿಯೇ ಲಕ್ಷಾಂತರ ಮಂದಿ ವೀಕ್ಷಕರು ಸಂಜೆಯ ಹೊತ್ತು ಬರುತ್ತಾರೆ. ಈ ಸಂದರ್ಭದಲ್ಲಿ ಆಗುವ ವಿಶಿಷ್ಟ ಅನುಭವಕ್ಕಾಗಿ ಜನ ಹಾತೊರೆಯುತ್ತಾರೆ.
ಕಡಲ ತೀರದ ಸುತ್ತ ಸಾಕಷ್ಟು ರಜೆ ಕಳೆಯುವ ತಾಣಗಳು ಇವೆ. ಎಲ್ಲಾ ಬೆಲೆಯ, ಸೌಲಭ್ಯ ಒಳಗೊಂಡ ಹೋಟೆಲ್‌ಗಳು, ರೆಸಾರ್ಟ್ ಗಳು ಲಭ್ಯವಿದ್ದು, ಅಗತ್ಯ ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು. ಈ ಕಡಲ ತೀರ ಸ್ನಾನ ಮಾಡಲು ಹಾಗೂ ಈಜಾಡಲು ಸೂಕ್ತ ತಾಣವಾಗಿದೆ. ಸಂಜೆಯ ಹೊತ್ತು ಸಾಕಷ್ಟು ಜನ ಸೇರುತ್ತಾರೆ. ಹಗಲು ಹೊತ್ತಲ್ಲು ಒಂದಿಷ್ಟು ಮಂದಿ ಇದ್ದೇ ಇರುತ್ತಾರೆ. ಒಟ್ಟಾರೆಯಾಗಿ ಈ ಕಡಲ ತೀರವು ಭೇಟಿ ನೀಡಿದವರಿಗೆ ಸಾಕಷ್ಟು ಉತ್ಸಾಹವನ್ನು ತುಂಬಿ ಕಳುಹಿಸುವಲ್ಲಿ ಅನುಮಾನವೇ ಇಲ್ಲ.


Click it and Unblock the Notifications