Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಅಕೇನಕೋಯಿಲ್‌

ಅಕೇನಕೋಯಿಲ್‌, ಕೊಲ್ಲಂ

1

ಇದೊಂದು ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಅಲ್ಲದೇ ಕೇರಳದ ಜನಪ್ರಿಯ ಸ್ಥಳ ವೀಕ್ಷಣಾ ತಾಣವೂ ಆಗಿದೆ. ಕೊಲ್ಲಂನಿಂದ 60 ಕಿ.ಮೀ. ದೂರದಲ್ಲಿದೆ. ದಟ್ಟ ಅರಣ್ಯ, ದೇವಾಲಯ ಹಾಗೂ ಜಲಪಾತದಿಂದ ಜನಪ್ರಿಯವಾಗಿದೆ.

ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆ ಅಕೇನಕೋಯಿಲ್‌ ಸಾಸ್ತಾ ದೇವಾಲಯ. ಬಹು ಜನರ ಭಕ್ತಿಯ ಆಚರಣೆಯ ದೇವರಾದ ಅಯ್ಯಪ್ಪ ಸ್ವಾಮಿ ದೇವಾಲಯ ಇದಾಗಿದೆ. ಭಕ್ತರನ್ನು ಹಾಗೂ ಇತಿಹಾಸ ಪ್ರೇಮಿಗಳನ್ನು ಈ ದೇವಾಲಯ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುತ್ತದೆ. ಈ ದೇವಾಲಯದಲ್ಲಿ ಅಯ್ಯಪ್ಪ ಮೂರ್ತಿಯನ್ನು ಇಲ್ಲಿ ಕ್ರಿಶ್ಚಿಯನ್ನರ ಆಳ್ವಿಕೆ ಇರುವ ಸಂದರ್ಭದಲ್ಲಿ ನಿರ್ಮಿಸಲಾಗಿದೆಯಂತೆ. ಇಲ್ಲಿ ನಡೆಯುವ ಮಂಡಲ ಪೂಜೆ ಹಾಗೂ ರೇವತಿ ಉತ್ಸವ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದು ಡಿಸೆಂಬರ್‌- ಜನವರಿ ಹಾಗೂ ಜನವರಿ- ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ಪುಷ್ಪಾಭಿಷೇಕಂ ಇಲ್ಲಿ ಅತ್ಯಂತ ಪ್ರಮುಖ ಆಚರಣೆಯಾಗಿದ್ದು. ಈ ಕಾರಣದಿಂದಲೇ ದಕ್ಷಿಣ ಭಾರತದಲ್ಲಿಯೇ ಇದು ಇತರೆ ದೇವಾಲಯಗಳಿಗಿಂತ ಭಿನ್ನ ಅನ್ನಿಸಿಕೊಂಡಿದೆ.

ಇಲ್ಲಿನ ಇತರೆ ಪ್ರವಾಸಿ ಆಕರ್ಷಣೆಗಳೆಂದರೆ ಕುಂಭವೃತ್ತಿ ಜಲಪಾತ ಹಾಗೂ ಮನ್ಲಾರ್‌ ಜಲಪಾತಗಳು. ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಇವು ಕಂಡು ಬರುತ್ತವೆ. ಇದರಿಂದ ಈ ಪ್ರದೇಶ ಪ್ರವಾಸಿಗರು ಹಾಗೂ ಭಕ್ತರು ಇಬ್ಬರನ್ನೂ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon