Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ವಿಧುರಾಶ್ವತ್ಥ

ವಿಧುರಾಶ್ವತ್ಥ, ಕೋಲಾರ

1

ಕೋಲಾರದ ಮೂಲಕ ಹಾದು ಹೋಗುವ ಪ್ರವಾಸಿಗರು ಒಮ್ಮೆ ವಿಧುರಾಶ್ವತ್ಥಕ್ಕೆ ಭೇಟಿಕೊಡಬಹುದು. ಈ ಸ್ಥಳವು ಗೌರಿಬಿದನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿದೆ. ಇದು ಭಾರತದ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ಈ ಸ್ಥಳಕ್ಕೆ ಹೋದಾಗ ಪ್ರವಾಸಿಗರು ಇಲ್ಲಿ ಮಹಾಭಾರತ ಕಾಲದಲ್ಲಿ (ದ್ವಾಪರ ಯುಗದಲ್ಲಿ) ಮೈತ್ರೇಯ ಮಹಾಮುನಿ ನೆಟ್ಟ ಪವಿತ್ರ ಅಶೋಕ ವೃಕ್ಷವನ್ನು ಕಾಣಬಹುದು. ಕೃಷ್ಣನ ಪರಮಭಕ್ತನಾದ ವಿದುರನು ಇಲ್ಲಿ ಪೂಜೆಗಳನ್ನು ಮಾಡಿದನೆಂಬ ಕಾರಣದಿಂದ ಈ ಪುಣ್ಯಕ್ಷೇತ್ರ ವಿದುರಾಶ್ವತ್ಥವೆಂಬ ಹೆಸರು ಪಡೆಯಿತು.ಅಶೋಕ ವೃಕ್ಷವು ಮಾನವನ ಜೀವನಕ್ಕೆ ಸಂಬಂಧಿಸಿದಂತೆ ನಾಲ್ಕು ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ. ಈ ಮರದ ಕೆಲವು ಭಾಗಗಳನ್ನು ಔಷಧಿಗಳ ಸಲುವಾಗಿ ಬಳಸುತ್ತಾರೆ. ಈ ಸ್ಥಳವು 1938ರಲ್ಲಿ  ನಡೆದ ಸತ್ಯಗ್ರಹ ಚಳವಳಿಯಿಂದಾಗಿ ಐತಿಹಾಸಿಕವಾಗಿ ಸಹಾ ಮಹತ್ವ ಪಡೆದಿದೆ. ವಿದುರಾಶ್ವತ್ಥವು ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವಗಳಿಂದಾಗಿ ಧರ್ಮ, ಮರ್ಮ ಮತ್ತು ದೇಶಪ್ರೇಮ ಕೂಡುವ ಸಂಗಮ ಕ್ಷೇತ್ರವೆಂದು ಕರೆಯಲಾಗುತ್ತಿದೆ.ಇಲ್ಲಿ ನಡೆಯುವ ರಥೋತ್ಸವದ ಸಮಯದಲ್ಲಿ ಈ ಪುಣ್ಯಸ್ಥಳಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇದು ಚೈತ್ರ ಮಾಸದ ಪೌರ್ಣಮಿಯ ದಿನ ಜರುಗುತ್ತದೆ. ಇಲ್ಲಿನ ದೇವಾಲಯದಲ್ಲಿ ಹಲವಾರು ವಿವಾಹ ಸಮಾರಂಭಗಳು ನೆರವೇರುತ್ತಲೆ ಇರುತ್ತವೆ. ಪ್ರವಾಸಿಗರು  ದೇವಾಲಯದ ಹಿಂಭಾಗದಲ್ಲಿರುವ ’ಸತ್ಯಗ್ರಹ ಸ್ಮಾರಕ’ಕ್ಕೆ ಸಹಾ ಭೇಟಿಕೊಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed