Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಅವನಿ

ಅವನಿ, ಕೋಲಾರ

1

ಪ್ರವಾಸಿಗರು ಕೋಲಾರ ಜಿಲ್ಲೆಗೆ ಹೋದಾಗೊಮ್ಮೆ ಅವನಿ ಗ್ರಾಮಕ್ಕೆ ಒಮ್ಮೆ ಭೇಟಿ ಕೊಡಬಹುದು.  ಈ ಊರು ತನ್ನಲ್ಲಿನ ರಾಮಲಿಂಗೇಶ್ವರ ದೇವಾಲಯಗಳ ಸಮೂಹದಿಂದಾಗಿ ಹೆಸರುವಾಸಿಯಾಗಿದೆ. ಅವನಿಯು ದಕ್ಷಿಣದ ಗಯಾ ಎಂದು ಸಹಾ ಖ್ಯಾತಿ ಪಡೆದಿದೆ.  ಇದು ಕೋಲಾರ ಗೋಲ್ಡ್ ಫೀಲ್ಡ್ಸ್ ( ಕೆ.ಜಿ.ಎಫ್) ನಿಂದ 10 ಕಿ.ಮೀ ದೂರದಲ್ಲಿದೆ. ಈ ಊರಿನಲ್ಲಿ ಸೀತಾದೇವಿಗಾಗಿ ಕಟ್ಟಲಾದ ಒಂದು ದೇವಾಲಯವಿದೆ. ಇದು ಈ ದೇವಿಗಾಗಿ ಕಟ್ಟಲಾದ ಒಂದು ಅಪರೂಪದ ದೇವಾಲಯವಾಗಿದೆ.ಪುರಾಣಗಳ ಪ್ರಕಾರ ಸೀತಾದೇವಿಯು ಅವನಿ ಗ್ರಾಮದಲ್ಲಿಯೆ ಲವ-ಕುಶರಿಗೆ ಜನ್ಮನೀಡಿದಳಂತೆ, ಅಲ್ಲದೆ ಇದೇ ಗ್ರಾಮದಲ್ಲಿಯೇ ರಾಮನು ತನ್ನ ಇಬ್ಬರು ಮಕ್ಕಳ ಜೊತೆ ಯುದ್ಧ ಮಾಡಿದನಂತೆ. ಪ್ರವಾಸಿಗರು ಇಲ್ಲಿ ಲವ-ಕುಶರು ಜನಿಸಿದ ಕೋಣೆಯನ್ನು ಕಾಣಬಹುದು. ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಇಲ್ಲಿ ಆಶ್ರಮವನ್ನು ಕಟ್ಟಿಕೊಂಡು ಕೆಲ ಕಾಲ ತಂಗಿದ್ದನೆಂದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.ಅವನಿ ಮೂಲಕ ಹಾದು ಹೋಗುವ ಪ್ರವಾಸಿಗರು ಇಲ್ಲಿನ ಅವನಿ ಜಗುದ್ಗುರು ಶಂಕರಾಚಾರ್ಯ ಶಾರದಾ ಪೀಠಕ್ಕೆ ಭೇಟಿಕೊಡುತ್ತಾರೆ. ಈ ಮಠವನ್ನು ಪೂಜ್ಯ ಯತಿಗಳಾದ ಶ್ರೀ ನಾಲ್ವಡಿ ನರಸಿಂಹ ಭಾರತಿಯವರು ಇಲ್ಲಿ ಶಾರದಾ ದೇವಿಯ ಮೂರ್ತಿಯನ್ನು ಕಂಡುಹಿಡಿದ ಮೇಲೆ ಇಲ್ಲಿ ಸ್ಥಾಪಿಸಿದರು.  ಈ ಮಠವು ನಿಂತ ಭಂಗಿಯಲ್ಲಿರುವ ದೇವಿಯ ಮೂರ್ತಿಯನ್ನು ಹೊಂದಿದೆ. ಅದರ ಪಾರ್ಶ್ವದಲ್ಲಿಯೆ ಶ್ರೀ ಚಕ್ರ ಮತ್ತು ಶ್ರೀ ಮದ್ ಜಗದ್ಗುರು ಶಂಕರಾಚಾರ್ಯರ ಮೂರ್ತಿಗಳು ಇವೆ.. ಅವನಿಗೆ ಭೇಟಿಕೊಡುವ ಪ್ರವಾಸಿಗರು ಇಲ್ಲಿ ಚಾರಣ ಮತ್ತು ಶಿಲಾರೋಹಣ ಇಲ್ಲವೆ ಪರ್ವತಾರೋಹಣಗಳಲ್ಲಿ ಪಾಲ್ಗೋಳ್ಳಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon