Search
 • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಕೋಲಾರ ಗೋಲ್ಡ್ ಫೀಲ್ಡ್ಸ್

ಕೋಲಾರ ಗೋಲ್ಡ್ ಫೀಲ್ಡ್ಸ್, ಕೋಲಾರ

2

ಪ್ರವಾಸಿಗರು ಕೋಲಾರಕ್ಕೆ ಬಂದಾಗ ಬಂಗಾರ ಪೇಟೆ ತಾಲ್ಲೂಕಿನಲ್ಲಿರುವ ಕೋಲಾರ  ಗೋಲ್ಡ್ ಫೀಲ್ಡ್ಸ್ ಗೆ ಒಮ್ಮೆ ಭೇಟಿಕೊಡಬಹುದು. ಈ ಸ್ಥಳವು ಬ್ರಿಟೀಷರ ಕಾಲದಲ್ಲಿ ಚಿನ್ನದ ಉತ್ಪಾದನೆಗೆ ಹೆಸರುವಾಸಿಯಾಗಿತ್ತು. ವಸಾಹತು ಕಾಲದಲ್ಲಿ ಈ ನಗರವು ಆಂಗ್ಲೋ- ಇಂಡಿಯನ್ ಗಳಲ್ಲದೆ ಇಟಲಿ , ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಮ್ ದೇಶವಾಸಿಗಳಿಗೆ ಆಶ್ರಯ ನೀಡಿತ್ತು.ಕೋಲಾರ ಗೋಲ್ಡ್ ಫೀಲ್ಡ್ಸ್ ಒಂದಾನೊಂದು ಕಾಲದಲ್ಲಿ ಭಾರತ್ ಗೋಲ್ದ್ ಮೈನ್ಸ್ ಲಿಮಿಟೆಡ್ (ಬಿ ಜಿ ಎಮ್ ಎಲ್)ನ  ಸಾವಿರಾರು ಕಾರ್ಮಿಕರ ಕುಟುಂಬಗಳಿಗೆ ಆಶ್ರಯ ನೀಡಿತ್ತು. 2003 ರಲ್ಲಿ ಈ ಚಿನ್ನದ ಗಣಿ ಮುಚ್ಚುವ ಮೂಲಕ ಈ ಸಂಖ್ಯೆ ನೂರರ ಹಾಸು ಪಾಸಿಗೆ ಇಳಿಯಿತು. ಬ್ರಿಟೀಷರು ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿನ ವಾತಾವರಣ ಮತ್ತು ಇಲ್ಲಿನ ಪ್ರದೇಶದ ರಮ್ಯ ನೋಟಕ್ಕೆ ಮನಸೋತಿದ್ದರು. ಅಲ್ಲದೆ ಇಲ್ಲಿನ ನೆಲ ವಾತಾವರಣ ಇಂಗ್ಲೇಂಡನ್ನು ಹೋಲುತ್ತಿದ್ದ ಕಾರಣ ಕೋಲಾರ ಗೋಲ್ಡ್ ಫೀಲ್ಡ್ಸ್ ಗೆ ’ ಪುಟ್ಟ ಇಂಗ್ಲೆಂಡ್’ ’ (ಮಿನಿ ಇಂಗ್ಲೆಂಡ್) ಎಂದು ಹೆಸರಿಟ್ಟಿದ್ದರು. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಬ್ರಿಟೀಷ್ ಶೈಲಿಯಲ್ಲಿ ನಿರ್ಮಿಸಲಾದ ಬಂಗಲೆಗಳನ್ನು ನೋಡುವ ಅವಕಾಶ ಸಿಗುತ್ತದೆ.ಕೋಲಾರವು ಏಶಿಯಾದಲ್ಲಿಯೆ ಟೋಕಿಯೊ (ಜಪಾನ್) ನಂತರ ಜಲವಿದ್ಯುತ್ ನಿಂದ ವಿದ್ಯುತ್ ಸಂಪರ್ಕ ಪಡೆದ ಎರಡನೆಯ ನಗರವಾಗಿದೆ. ಈ ಜಲವಿದ್ಯುತ್ ಯೋಜನೆಯು ( ಶಿವನ ಸಮುದ್ರ) ದಕ್ಷಿಣ ಭಾರತದ ಮೊದಲ ಜಲವಿದ್ಯುತ್ ಯೋಜನೆಯಾಗಿತ್ತು. ಇದು ಕೋಲಾರ ಗೋಲ್ಡ್ ಫೀಲ್ಡ್ಸ್ ಗೆಂದು 1902ರಲ್ಲಿ ಮಂಜೂರಾದ ಯೋಜನೆಯಾಗಿತ್ತು. ಪ್ರವಾಸಿಗರು ಇಲ್ಲಿನ ದೊಡ್ಡ ಬೆಟ್ಟಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಕೋಲಾರ ಗೋಲ್ಡ್ ಫೀಲ್ಡ್ಸ್ ನ ಪೂರ್ವಕ್ಕೆ ಇದ್ದು ಸಮುದ್ರ ಮಟ್ಟದಿಂದ 3195 ಅಡಿ ಎತ್ತರದಲ್ಲಿದೆ.

One Way
Return
From (Departure City)
To (Destination City)
Depart On
22 Nov,Fri
Return On
23 Nov,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Nov,Fri
Check Out
23 Nov,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Nov,Fri
Return On
23 Nov,Sat
 • Today
  Kolar
  29 OC
  84 OF
  UV Index: 8
  Partly cloudy
 • Tomorrow
  Kolar
  26 OC
  78 OF
  UV Index: 7
  Patchy rain possible
 • Day After
  Kolar
  25 OC
  76 OF
  UV Index: 6
  Moderate or heavy rain shower