ಕೊಚ್ಚಿಯ ವೈಪಿನ್ ನ ಮಲಿಪುರಂನಲ್ಲಿರುವ ಮಸ್ಟಾಪೆಡ್ ಕ್ಷೀರ ಮಾರ್ಗದ ಆಕ್ವಾ ಪ್ರವಾಸಿ ಗ್ರಾಮ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ಈ ಪ್ರದೇಶ ಎರ್ನಾಕುಲಂನಿಂದ 12 ಕಿಲೋಮೀಟರ್ ದೂರದಲ್ಲಿದೆ. ಈ ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಸುತ್ತಾಡಬಹುದು. ಪರಿಸರ ಸ್ನೇಹಿಯಾದ ಮೀನು ಫಾರ್ಮ್ ಇಲ್ಲಿದ್ದು, ಇಲ್ಲಿ ಮೀನುಗಾರಿಕೆ ನಡೆಸುತ್ತಾ ನೀವು ಆನಂದಿಸಬಹುದು. ಇಲ್ಲಿಗೆ ನೀವು ತೆರಳ ಬೇಕಾದರೆ, ಗೂಶ್ರೀ ಸೇತುವೆಯ ಮೂಲಕ ಹೋಗಬೇಕು. ಹಾಲು ಹಾದಿಯ ಪ್ರವಾಸ ಮನಗಾನಂದವನ್ನು ನೀಡುತ್ತದೆ. ಇದು ಪಿಕ್ನಿಕ್ ಗೆ ಹೇಳೀ ಮಾಡಿಸಿದಂಥ ಜಾಗ. ನಿಮ್ಮ ಬಾಯಿಚಪಲ ತೀರಿಸುವ ಸಲುವಾಗಿ ಈ ಉದ್ಯಾನದ ಒಳಗೇ ಅನೇಕ ರೆಸ್ಟೋರೆಂಟ್ ಗಳು ಇವೆ. ಮಸ್ಟಾಪೆಡ್ ಹಾಲುಹಾದಿಯ ಆಕ್ವಾ ಪ್ರವಾಸಿ ಗ್ರಾಮ ಕರಾವಳಿ ನಿಯಂತ್ರಣ ವಲಯ ಯೋಜನೆಯ ವ್ಯಾಪ್ತಿಯಲ್ಲಿದೆ.
ಬೀಚ್ ಫಾರ್ಮ್ನೊಂದಿಗೆ ಬೆಸೆಯಲಾದ, ಮಾಲಿನ್ಯ ರಹಿತವಾದ ಈ ಪ್ರದೇಶ ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಆನಂದ ನೀಡುತ್ತದೆ. ಮ್ಯಾಂಗ್ರೋವ್ ಕಾಡುಗಳು ಇಲ್ಲಿನ ಜೀವಾಳವಾಗಿದ್ದು, ಗ್ರಾಮದ ಸುರಕ್ಷತೆ ಹಾಗೂ ನಿರ್ವಹಣೆಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ. ನಿಮಗೆ ನೀವೇ ತರೆದುಕೊಳ್ಳುವ ಹಿತಾನುಭವ ಅನುಭವಿಸುವ ಮನಸುಳ್ಳವರಾದರೆ ಈ ಊರಿಗೆ ಬನ್ನಿ. ದಾರಿಯಲ್ಲಿ ಸಾಕಷ್ಟು ಅಂಗಡಿಗಳೂ ಇರುವುದರಿಂದ ನಿಮ್ಮ ಎಲ್ಲ ಬಯಕೆಗಳಿಗೂ ಉತ್ತರ ಸಿಗುತ್ತದೆ.


Click it and Unblock the Notifications