ಕುಂಬಳಾಂಗಿ ಸಂಯೋಜಿತ ಪ್ರವಾಸೀ ಗ್ರಾಮ ಕೊಚ್ಚಿನಗರದ ಹೃದಯ ಭಾಗದಿಂದ ಸುಮಾರು 15 ಕಿಮೀ ದೂರದಲ್ಲಿದೆ. ಇದೊಂದು ಸಣ್ಣ ದ್ವೀಪ ಗ್ರಾಮ. ಆದರೆ ಇಲ್ಲಿನ ಪ್ರವಾಸೀ ಸಾಧ್ಯತೆಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೆಸೆಯಿಂದಾಗಿ ವಿಶ್ವ ಮಟ್ಟದಲ್ಲಿ ಈ ಪ್ರದೇಶ ಹೆಸರು ಗಳಿಸಿದೆ.
ಈ ಗ್ರಾಮದ ಸುತ್ತಲೂ ಇರುವ ಪ್ರಶಾಂತ ಹಿನ್ನೀರು ಮನಸಿಗೆ ಆನಂದವನ್ನು ನೀಡುತ್ತದೆ. ಇಲ್ಲಿ ದೋಣಿ ವಿಹಾರ ಮತ್ತು ಮೀನುಗಾರಿಕೆಯನ್ನು ನಡೆಸಬಹುದು. ಪ್ರವಾಸೋದ್ಯಮ ಗ್ರಾಮ ಯೋಜನೆ ಜಾರಿಗೆ ಬಂದದ್ದರಿಂದ ಇಲ್ಲಿನ ಎಲ್ಲ ಚಟುವಟಿಕೆಗಳು ಗರಿಗೆದರಿದವು. ಈ ಯೋಜನೆಯಿಂದಾಗಿ ಭಾರತದಲ್ಲೇ ಪ್ರಥಮ ಹಾಗೂ ಮಾದರಿ ಮೀನುಗಾರಿಕೆ ಹಾಗೂ ಪ್ರವಾಸಿ ತಾಣವಾಗಿ ಆಗಿ ಕುಂಬಳಾಂಗಿಯನ್ನು ಮಾಡುವ ಕನಸು ಇಲ್ಲಿನ ಆಡಳಿತದ್ದಾಗಿದೆ. ಸುತ್ತಮುತ್ತಲಿನ ಪ್ರದೇಶದ ದೃಶ್ಯಾವಳಿ, ಹಿನ್ನೀರನ್ನು ನೋಡುವುದಕ್ಕಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಮೀನುಗಾರಿಕೆಯನ್ನೂ ಆಸ್ವಾದಿಸಲು ಇಲ್ಲಿ ಅವಕಾಶವಿರುವುದರಿಂದ ಪ್ರವಾಸಿಗರಿಗೆ ಮನದಾನಂದವಾಗುತ್ತದೆ. ಹಿನ್ನೀರಿನಲ್ಲಿ ದೋಣಿ ವಿಹಾರ ಮಾಡುವವರಿಗಾಗಿ ಹಗಲು ಮತ್ತು ರಾತ್ರಿಗಳೆಂಬ ಪ್ಯಾಕೆಜ್ ವ್ಯವಸ್ಥೆ ಮಾಡಲಾಗಿದ್ದು, ನಿಮಗೆ ಅನುಕೂಲವಾಗಿದ್ದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಮೊದಲೇ ತಿಳಿಸಿಟ್ಟರೆ, ಇಲ್ಲಿನ ಅಧಿಕಾರಿಗಳು ನಿಮಗಾಗಿ ಸಾಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡುತ್ತಾರೆ. ಮಳೆಗಾಲವನ್ನು ಹೊರತುಪಡಿಸಿದರೆ, ಮತ್ತೆಲ್ಲಾ ದಿನಗಳಲ್ಲೂ ಇಲ್ಲಿಗೆ ಬರಲು ಸಕಾಲ.


Click it and Unblock the Notifications