ಕೊಚ್ಚಿ ಕೇಂದ್ರಸ್ಥಾನದಿಂದ ಕೇವಲ 3 ಕಿಲೋಮೀಟರ್ ಅಂತರದಲ್ಲಿರುವ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಇಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. 1955 ರಲ್ಲಿ ಈ ಗುರುದ್ವಾರ ಅಸ್ತಿತ್ವಕ್ಕೆ ಬಂತು. ಹೆಸರೇ ಸೂಚಿಸುವಂತೆ ಇದು ಕೇರಳದ ಸಿಖ್ ಸಮುದಾಯಕ್ಕೆ 'ಗುರುವಿನೆಡೆಗೆ ತೆರಳುವ ಹೆಬ್ಬಾಗಿಲು' ಆಗಿದೆ. ಗುರುದ್ವಾರವನ್ನು ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ನಿರ್ಮಿಸಲಾಗಿತ್ತು ಬಳಿಕ ಸದ್ಯದ ಗುರುದ್ವಾರಾವನ್ನು 1975 ರಲ್ಲಿ ಸ್ಥಾಪನೆ ಮಾಡಲಾಯಿತು. ಗುರುದ್ವಾರವನ್ನು ಮೊಘಲ್ ವಾಸ್ತುಶಿಲ್ಪ ಶೈಲಿ, ಹಿಂದೂ ಮತ್ತು ಮುಸ್ಲಿಂ ವಾಸ್ತುಶಿಲ್ಪದ ಸಂಯೋಜನೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಇಲ್ಲಿನ ದರ್ಬಾರ್ ಹಾಲ್ನಲ್ಲಿ ಎಲ್ಲಾ ರಂಗಗಳ ಜನರು ಒಂದೆಡೆ ಕಲೆತು ಪ್ರಾರ್ಥನೆ ಸಲ್ಲಿಸುತ್ತಾರೆ. ಗುರುದ್ವಾರ ಭೇಟಿ ಸಿಖ್ಖರ ಸಂಸ್ಕೃತಿ ಮತ್ತು ಅವರ ವಿಶಿಷ್ಟವಾದ ಆತಿಥ್ಯ ವನ್ನು ಸ್ವೀಕರಿಸುವ ಇಚ್ಛೆ ನಿಮಗಿದ್ದರೆ ಇಲ್ಲಿಗೆ ಬನ್ನಿ.


Click it and Unblock the Notifications