ಕಡಲ ತಡಿಗುಂಟ ಹಬ್ಬಿರುವ ಕೋಟೆ ಕೊಚ್ಚಿಯ ಅವಿಭಾಜ್ಯ ಅಂಗವೂ ಹೌದು. ಒಂದಾನೊಂದು ಕಾಲದ ವೈಭವವನ್ನು ಸಾರುತ್ತ, ಇವತ್ತಿಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿರುವ ವಿಶಿಷ್ಠವಾದ ಪ್ರದೇಶ ಇದಾಗಿದೆ. ಹೊರ ಜಗತ್ತಿನೊಂದಿಗೆ ಬೃಹತ್ ಸೇತುವೆಯ ಮೂಲಕ ಈ ಕೋಟೆಯ ಸಂಪರ್ಕ. ಐತಿಹಾಸಿಕ ಅಚ್ಚರಿಗಳ ಸಂತೆ ಇದು. ಕಲೆ, ಆಹಾರ ಮತ್ತು ಧಾರ್ಮಿಕ ಸಂಗತಿಗಳಿಂದ ಕೂಡಿರುವುದು ಈ ಪ್ರದೇಶದ ಹೆಚ್ಚುಗಾರಿಕೆ. ಇಲ್ಲಿನ ಸೈಕಲ್ ಸವಾರಿ ಖುಷಿಕೊಡುತ್ತದೆ. ಬಾಡಿಗೆ ಸೈಕಲ್ ಮತ್ತು ಬೈಕುಗಳು ಸಿಗುತ್ತವೆ. ಈ ಕೋಟೆಯೊಳಗೆ ಇರುವ ವಸ್ತುಸಂಗ್ರಹಾಲಯಗಳು, ಅರಮನೆಗಳು, ಸೀನಗಾಗ್ಗಳು, ಹಿಂದೂ ದೇವಾಲಯಗಳು, ಚರ್ಚುಗಳು, ಪಾರಂಪರಿಕ ಕಟ್ಟಡಗಳು, ಕಲಾ ಉದ್ಯಾನಗಳು, ಕಡಲ ಕಿನಾರೆ, ಆಯುರ್ವೇದ ಅಂಗಮರ್ಧನಗಳು, ರಸ್ತೆಬದಿಯ ಕೆಫೆಗಳು ಯಾವಾಗಲೂ ಸ್ಮರಣೆಯಲ್ಲಿರುವಂಥ ಶಾಪಿಂಗ್ ಅನುಭವ ನೀಡುತ್ತವೆ. ಪ್ರಖ್ಯಾತ ಪರಂಪರಾ ತಾಣವಾಗಿರುವ ಈ ಪ್ರದೇಶದಲ್ಲಿರುವ ಹಲವಾರು ಹೋಂ ಸ್ಟೇಗಳು ನಿಮಗೆ ಮನೆಯಲ್ಲಿಯೇ ತಂಗಿದಂಥ ಆತ್ಮೀಯ ಅನುಭೂತಿಯನ್ನು ನೀಡುತ್ತವೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕೇರಳಾದ ಸಂಸ್ಕೃತಿಯೊಂದಿಗೆ ಪೋರ್ಚುಗೀಸ್, ಯಹೂದಿ, ಗ್ರೀಕರು ಮತ್ತು ಟಿಬೆಟಿಯನ್ ಸಂಸ್ಕೃತಿಗಳೂ ಬೆರೆತಿರುವುದು. ಇದು ಅಪೂರ್ವ ಅನುಭವವನ್ನು ನೀಡುತ್ತದೆ.


Click it and Unblock the Notifications