ಬುಶಿ ಕೆರೆಯು ಖಂಡಾಲಾದಲ್ಲಿ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಕೆರೆಯ ದಂಡೆಯಲ್ಲಿ ಕಾಲ ಕಳೆಯ ಬಯಸುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇದು ಪ್ರಶಾಂತವಾದ ವಾತಾವರಣ ಮತ್ತು ನಿಶ್ಕಲ್ಮಷವಾದ ನೀರಿನಿಂದ ಕೂಡಿದ್ದು, ಪ್ರವಾಸಿಗರಿಗೆ ಪ್ರಶಾಂತವಾದ ವಾತಾವರಣವನ್ನು ಒದಗಿಸುತ್ತದೆ.
ಇದರ ಜೊತೆಗೆ ಖಂಡಾಲಾದಲ್ಲಿ ಹಲವಾರು ಕೆರೆಗಳು ಮತ್ತು ಝರಿಗಳು ಹರಿಯುತ್ತಿರುತ್ತವೆ. ತುಗೌಲಿ ಕೆರೆ, ಲೋನಾವಲಾ ಕೆರೆ ಮತ್ತು ವಾಲ್ವನ್ ಜಲಾಶಯಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇವು ಪ್ರವಾಸಿಗರಿಗೆ ಮರೆಯಲಾಗದ ಅನುಭವಗಳನ್ನು ಒದಗಿಸುತ್ತವೆ.


Click it and Unblock the Notifications