Search
  • Follow NativePlanet
Share
ಮುಖಪುಟ » ಸ್ಥಳಗಳು » ಖಂಡಾಲಾ » ಹವಾಮಾನ

ಖಂಡಾಲಾ ಹವಾಮಾನ

ಖಂಡಾಲಾದಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ಹವಾಮಾನವಿರುತ್ತದೆ. ಹಾಗಾಗಿ ಯಾವಾಗ ಬೇಕಾದರು ಇಲ್ಲಿಗೆ ಭೇಟಿಕೊಡಬಹುದು. ಆದರು ಸಹ ಇಲ್ಲಿಗೆ ಭೇಟಿಕೊಡಲು ಅಕ್ಟೋಬರ್ ನಿಂದ ಮೇ ನಡುವಿನ ಸಮಯವು ಅತ್ಯಂತ ಸೂಕ್ತವಾದ ಕಾಲವಾಗಿದೆ. ಈ ಅವಧಿಯಲ್ಲಿ ಇಲ್ಲಿನ ಹವಾಮಾನ ಅತ್ಯುತ್ತಮವಾಗಿದ್ದು, ಖಂಡಾಲಾವನ್ನು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಸಹಾಯಕವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಖಂಡಾಲಾದಲ್ಲಿ ಎಪ್ರಿಲ್ ಮತ್ತು ಜೂನ್‍ ತಿಂಗಳುಗಳ ನಡುವೆ ಬರುತ್ತದೆ. ಆಗ ಇಲ್ಲಿ ಉಷ್ಣಾಂಶವು 32 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ವರ್ಷದ ಇನ್ನಿತರ ಕಾಲಕ್ಕಿಂತ ಸ್ವಲ್ಪ ಮಟ್ಟಿಗೆ ಬಿಸಿಲಿನಿಂದ ಕೂಡಿರುತ್ತದೆ.

ಮಳೆಗಾಲ

ಮಳೆಗಾಲವು ಇಲ್ಲಿ ಜೂನ್‍ನಲ್ಲಿ ಆರಂಭವಾಗಿ ಸೆಪ್ಟೆಂಬರ್‍ ವರೆಗೆ ಇರುತ್ತದೆ. ಈ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಪರಿಣಾಮವಾಗಿ ಅತ್ಯಧಿಕ ಪ್ರಮಾಣದ ಮಳೆ ಬೀಳುತ್ತದೆ. ಹಾಗಾಗಿ ಈ ಕಾಲದಲ್ಲಿ ಖಂಡಾಲಾಗೆ ಬರುವುದನ್ನು ಮುಂದೂಡುವುದು ಉತ್ತಮ.

ಚಳಿಗಾಲ

ಚಳಿಗಾಲವು ಖಂಡಾಲಾದಲ್ಲಿ ನವೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಹವಾಗುಣವು ತಂಪಾಗಿ ಇರುತ್ತದೆ. ಅಲ್ಲದೆ ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು ಕನಿಷ್ಠ 12° ಸೆಲ್ಶಿಯಸ್‍ನವರೆಗೆ ಕುಸಿಯುತ್ತದೆ. ಅಲ್ಲದೆ ಗರಿಷ್ಠ ಉಷ್ಣಾಂಶವು 32° ಸೆಲ್ಶಿಯಸ್‍ವರೆಗೆ ಏರುವ ಸಂಭವವಿರುತ್ತದೆ.