Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ವಾಮನ ದೇವಾಲಯ

ವಾಮನ ದೇವಾಲಯ, ಖಜುರಾಹೊ

9

ವಾಮನ ದೇವಾಲಯವು ಖಜುರಾಹೊದಲ್ಲಿರುವ ಪೂರ್ವ ದೇಗುಲಗಳ ಸಮೂಹದಲ್ಲಿ ಕಂಡುಬರುತ್ತದೆ. ಇದನ್ನು ಕ್ರಿ.ಶ 1050-1075ರ ಸುಮಾರಿಗೆ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ವಿಷ್ಣುವಿನ ಅವತಾರವಾದ ವಾಮನನಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಇನ್ನಿತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಹೇಗೆಂದರೆ ಈ ದೇವಾಲಯದ ಗರ್ಭಗುಡಿಗೆ ಪ್ರದಕ್ಷಿಣಾಪಥವಿಲ್ಲ. ಅಲ್ಲದೆ ಈ ದೇವಾಲಯವು ಆದಿನಾಥ ದೇವಾಲಯವನ್ನು ಬಹುತೇಕ ಹೋಲುತ್ತದೆ. ಶಿಖರ ಮತ್ತು ಮಹಾ ಮಂಟಪವು ಈ ದೇಗುಲಕ್ಕೆ ಮೆರಗನ್ನು ನೀಡಿವೆ.

ಈ ದೇಗುಲದ ವಾಸ್ತುಶಿಲ್ಪವು ಖಜುರಾಹೊದ ಇನ್ನಿತರ ದೇವಾಲಯಗಳನ್ನೇ ಹೋಲುತ್ತದೆ. ಗರ್ಭಗೃಹದಲ್ಲಿ ನಾವು ವಾಮನನ ಮೂರ್ತಿಯನ್ನು ನೋಡಬಹುದು. ಹೊರಭಾಗದ ಗೋಡೆಗಳ ಮೇಲೆ ದೇವರುಗಳು, ದೇವತೆಗಳು, ದೇವತೆಯರ ಸಂಗಾತಿಗಳು, ಸ್ತ್ರೀಯರ ವಿಗ್ರಹಗಳು, ಪೌರಾಣಿಕ ಜೀವಿಗಳನ್ನು ಇತ್ಯಾದಿಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಭಾಗದಲ್ಲಿ ಬೆಳೆಸಲಾಗಿರುವ ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಹಾಸಿನ ಹಿನ್ನಲೆಯು ದೇವಾಲಯದ ಶಿಲ್ಪಗಳಿಗೆ ತನ್ನದೇ ಆದ ಸೊಬಗನ್ನುಂಟು ಮಾಡಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat