Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಅಜಯ್‍ಘಡ್ ಕೋಟೆ

ಅಜಯ್‍ಘಡ್ ಕೋಟೆ, ಖಜುರಾಹೊ

1

ಅಜಯ್‍ಘಡ್ ಕೋಟೆಯು ಖಜುರಾಹೊದಿಂದ 80 ಕಿ.ಮೀ ದೂರದಲ್ಲಿದೆ. ಇದು ವಿಂಧ್ಯ ಪರ್ವತ ಶ್ರೇಣಿಯಲ್ಲಿರುವ ಒಂದು ಏಕಾಂತವಾದ ಬೆಟ್ಟದ ಮೇಲೆ ನೆಲೆಗೊಂಡಿದೆ. ಚಂಡೇಲ ರಾಜರು ತಮ್ಮ ರಾಜ್ಯವನ್ನು ಶತ್ರುಗಳ ದಾಳಿ ಮತ್ತು ಮುತ್ತಿಗೆಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಈ ಕೋಟೆಯನ್ನು ನಿರ್ಮಿಸಿದರು. ಅಜಯ್‍ಘಡ್ ಕೋಟೆಯು ಅತ್ಯದ್ಭುತವಾದ ಕೆನ್ ನದಿಯ ಮಂತ್ರ ಮುಗ್ಧಗೊಳಿಸುವಂತಹ ನೋಟಗಳನ್ನು ಒದಗಿಸುತ್ತದೆ. ಈ ಕೋಟೆಯು ಎರಡು ಭವ್ಯ ಪ್ರವೇಶ ದ್ವಾರಗಳನ್ನು ಒಳಗೊಂಡಿದೆ.

ಇವುಗಳಲ್ಲಿ ದರ್ವಝಾ ಎಂಬ ದ್ವಾರವು ಉತ್ತರ ಭಾಗದಲ್ಲಿ ನೆಲೆಗೊಂಡಿದ್ದರೆ, ತರ್ಹವ್ನಿ ಎಂಬ ದ್ವಾರವು ಆಗ್ನೇಯ ದಿಕ್ಕಿನಲ್ಲಿ ನೆಲೆಗೊಂಡಿದೆ. ಈ ಕೋಟೆಯಲ್ಲಿ ಅಷ್ಟ ಶಕ್ತಿ ದೇವಿಯ ಹಲವಾರು ವಿಗ್ರಹಗಳ ಶ್ರೀಮಂತ ಸಂಗ್ರಹವನ್ನು ನಾವು ಕಾಣಬಹುದು. ಈ ಕೋಟೆಯ ಆವರಣದಲ್ಲಿ ಅಜಯ್ ಪಲ್ ಕಾ ತಲಾವ್ ಎಂಬ ಪ್ರಸಿದ್ಧ ಕೆರೆಯನ್ನು ನಾವು ಕಾಣಬಹುದು. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಈ ಕೆರೆಯ ಸೌಂದರ್ಯವನ್ನು ಸವಿಯಬಹುದು. ಇದರ ಜೊತೆಗೆ ಈ ಕೋಟೆಯಲ್ಲಿ ಒಂದು ಜೈನ ದೇವಾಲಯ ಸಹ ಇದೆ. ಒಂದಾನೊಂದು ಕಾಲದಲ್ಲಿ ಇದು ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿತ್ತು, ಆದರೆ ಇಂದು ಅದು ಶಿಥಿಲಾವಸ್ಥೆಯಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed