ಇಲ್ಲಿರುವ ಮತ್ತೊಂದು ಜಲಪಾತವೆಂದರೆ ಶಾಂತಿ ಫಾಲ್ಸ್. ರುದ್ರರಮಣೀಯ ಪ್ರಪಾತಗಳನ್ನು ನೋಡುತ್ತ ಇಲ್ಲಿನ ಶಾಂತಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಮನಸೋಲುವಂತಾಗುತ್ತದೆ. ಎತ್ತರದ ಬೆಟ್ಟದಿಂದ ರಭಸದಿಂದ ಬೀಳುವ ನೀರನನ್ನು ನೋಡುವ ಪ್ರವಾಸಿಗರಿಗೆ ಇಲ್ಲಿಂದ ಕಾಣುವ ಅನೇಕ ಕಣಿವೆಗಳು ಪ್ರಕೃತಿಯ ವಿಸ್ಮಯವನ್ನು ಮನದಟ್ಟಾಗಿಸುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲುಗಳನ್ನು ಇಲ್ಲಿ ನೋಡುತ್ತ ಪ್ರವಾಸಿಗರು ಕೆಮ್ಮಣ್ಣುಗುಂಡಿಯ ಪ್ರವಾಸನ್ನು ಮರೆಯಲಾಗದ ಅನುಭವವಾಗಿಸಿಕೊಳ್ಳಬಹುದು.


Click it and Unblock the Notifications