ಕೆಮ್ಮಣ್ಣುಗುಂಡಿಯಿಂದ ಹತ್ತಿರದಲ್ಲೇ ಇರುವ ರಾಕ್ ಗಾರ್ಡನ್ ಕೂಡ ಪ್ರವಾಸಿಗರು ನೋಡಲೇಬೇಕಾದಂತಹ ಮತ್ತೊಂದು ಸುಂದರ ತಾಣ ಎನ್ನಬಹುದು.ಈ ರಾಕ್ ಗಾರ್ಡನ್ ಗೆ ಹೋಗಲು ಸುಂದರ ಕಲ್ಲಿನ ಹಾಸುಗೆಯಲ್ಲಿ ಆಕರ್ಷಕ ಪಾವಟಿಗೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎಲ್ಲ ತರಹದ ಹೂಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಇಲ್ಲಿಂದ ಸುತ್ತಲಿನ ಸುಂದರ ಹಚ್ಚಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳ ಸಾಲು ಮತ್ತು ಸೂರ್ಯಾಸ್ತದ ಸುಂದರ ದೃಶ್ಯವನ್ನು ನೋಡಬಹುದಾಗಿದೆ.ರಾಕ್ ಗಾರ್ಡನ್ ನಿಂದ ಭದ್ರಾ ಜಲಾಶಯವನ್ನೂ ಕೂಡ ನೋಡಬಹುದಾಗಿದೆ. ಇಲ್ಲಿಗೆ ಸಂಜೆ ಸಮಯದಲ್ಲಿ ಭೇಟಿ ನೀಡಿದರೆ ಒಳ್ಳೆಯದು. ಏಕೆಂದರೆ ಸುಂದರ ಸೂರ್ಯಾಸ್ತದ ದೃಶ್ಯವನ್ನು ಪ್ರವಾಸಿಗರು ನೋಡಬಹುದು.