Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಮ್ಮಣ್ಣುಗುಂಡಿ » ಹವಾಮಾನ

ಕೆಮ್ಮಣ್ಣುಗುಂಡಿ ಹವಾಮಾನ

ವಾತಾವರಣ ಅತ್ಯುತ್ತಮವಾಗಿರುವ ಸೆಪ್ಟೆಂಬರ್ ನಿಂದ ಮೇ ತಿಂಗಳಲ್ಲಿ ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ ) : ಬೇಸಿಗೆ ಕಾಲದಲ್ಲಿ ಕೆಮ್ಮಣ್ಣುಗುಂಡಿಯ ವಾತಾವರಣ ತುಂಬಾ ಆಹ್ಲಾದಕರವಾಗಿರುತ್ತದೆ. ಉಷ್ಣಾಂಶ ಇಲ್ಲಿ ಅತೀ ಹೆಚ್ಚೆಂದರೆ 34 ಡಿ.ಸೆ.ನಷ್ಟು ಏರಿಕೆಯಾಗುತ್ತದೆ. ರಾತ್ರಿಯಲ್ಲಿ 17 ಡಿ.ಸೆ.ನಷ್ಟು ಇಳಿಕೆಯಾಗುತ್ತದೆ. ಅತ್ಯುತ್ತಮ ವಾತಾವರಣ ಹೊಂದಿರುವ ಕೆಮ್ಮಣ್ಣುಗುಂಡಿಗೆ ಬೇಸಿಗೆ ಕಾಲದಲ್ಲಿ ಬಹಳಷ್ಟು ಸಂಖ್ಯೆಯ ಪ್ರವಾಸಿಗರು ಈ ಸುಂದರ ತಾಣಕ್ಕೆ ಭೇಟಿ ನೀಡುತ್ತಾರೆ.

ಮಳೆಗಾಲ

(ಜೂನ್ ನಿಂದ ಅಗಸ್ಟ್ ) : ಕೆಮ್ಮಣ್ಣುಗುಂಡಿಯಲ್ಲಿ ಮಳೆಗಾಲದಲ್ಲಿ ಮಿತವಾದ ಮಳೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿರುವ ಅನೇಕ ಜಲಪಾತಗಳನ್ನು ಪ್ರವಾಸಿಗರು ನೋಡಿ ಆನಂದಿಸಬಹುದು. ಉಷ್ಣಾಂಶ ಗರಿಷ್ಠ 23 ಡಿ.ಸೆ.ಕನಿಷ್ಠ 10 ಡಿ.ಸೆ.ನಷ್ಟಿರುತ್ತದೆ.

ಚಳಿಗಾಲ

(ಸೆಪ್ಟೆಂಬರ್ ನಿಂದ ಫೆಬ್ರವರಿ) : ಚಳಿಗಾಲದಲ್ಲಿ ಕೆಮ್ಮಣ್ಣುಗುಂಡಿಯಲ್ಲಿ ಸವ್ಲಪ ಹೆಚ್ಚೇ ಎನ್ನುವಷ್ಟು ತಂಪಾದ ವಾತಾವರಣವಿರುತ್ತದೆ. ಗರಿಷ್ಠ 29 ಡಿ.ಸೆ.ಉಷ್ಣಾಂಶ ಏರಿಕೆಯಾಗಿದ್ದರೆ, ಕನಿಷ್ಠ 12 ಡಿ.ಸೆ.ಇಳಿಕೆಯಾಗಿರುತ್ತದೆ.